ಗದಗ : ಮುಖ್ಯಮಂತ್ರಿಯವರೇ ಇಲ್ಲಿನೋಡಿ ನೀವು ನೀಡುವ ಅನ್ನಭಾಗ್ಯ ಯೋಜನೆಯಡಿ ನೀಡುವ ಪಡಿತರ ಅಕ್ಕಿ ಪಡೆಯಬೇಕಾದರೆ ಇಲ್ಲಿ ಹಣ ನೀಡಲೇಬೇಕು. ಪ್ರತಿ ಕಾರ್ಡ್ಗೆ 10 ರಿಂದ 20 ರೂಪಾಯಿ ಹಣಕೊಟ್ಟರೆ ಮಾತ್ರ ಪಡಿತರ ಅಕ್ಕಿ ನೀಡುತ್ತೇವೆ. ಹೌದು… ನಾವು ಹೇಳುತ್ತಿರುವ ವಿಷಯ ಸತ್ಯ ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾಕ್ಷೇತ್ರದ ಮುಂಡರಗಿ ತಾಲ್ಲೂಕಿಮ ಜಾಲ್ವಾಡಗಿ ಗ್ರಾಮದ ಸೊಸೈಟಿಯಲ್ಲಿ ಪಡಿತರ ಅಕ್ಕಿ ವಿತರಣೆ ಮಾಡುವ ಸಮಯದಲ್ಲಿ ಪ್ರತಿ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಂದ ಹಣ ತೆಗೆದುಕೊಳ್ಳುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಗದಗ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳು ಭಯ ಇಲ್ಲದೆ ಫಲಾನುಭವಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದಾರೆ, ಇದರ ಬಗ್ಗೆ ಫಲಾನುಭವಗಳು ಯಾವುದೇ ರೀತಿಯ ಧ್ವನಿ ಎತ್ತದೆ ಹಿಂಜರಿಯುತ್ತಿದ್ದಾರೆ. ಸರ್ಕಾರ ಏನು ಮಾಡುತ್ತಿದೆ ,ರಾಜ್ಯ ಹಲವಾರು ಸಮಸ್ಯೆಗಳಿಂದ ತುಂಬಿ ಹೋಗಿದೆ, ಮುಖ್ಯಮಂತ್ರಿಯವರು ಮಾತ್ರ ಕೈ ಕಟ್ಟಿ ಕುಳಿತಿದ್ದಾರಾ ?ವ್ಯವಸ್ಥೆಯನ್ನು ಸರಿಪಡಿಸಿ ಪಡಿತರ ಅಕ್ಕಿಯನ್ನು ಸಮಾನವಾಗಿ ನೀಡಬೇಕು ಮತ್ತು ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
