ಹಾನಗಲ್ : ಸಾಲದ ಹಣವನ್ನು ಮರುಪಾವತಿ ಮಾಡಲು ಹೋದ ವೇಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಹಿಳಾ ಮೇಲ್ವಿಚಾರಕಿಗೆ ಹಣವನ್ನು ಮರುಪಾವತಿ ಮಾಡುವುದಾಗಿ ಹೇಳಿ ಮನೆಗೆ ಕರೆಸಿ ಹಲ್ಲೆ ಮಾಡಿದ್ದಾರೆ.ಹೌದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಅಡಿಯಲ್ಲಿ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದ ಗೌರಮ್ಮ ಮತ್ತು ವಿಕ್ಷಣಾಧಿಕಾರಿ ಗಣೇಶ್ ಕಡಗೋಡ್ ಮೇಲೆ ತಾಲೂಕಿನ ಅಕ್ಕಿ ಆಲೂರು ಗ್ರಾಮದ ಮಸೀದಿ ಓಣಿಯ ಸುಲೇಮಾನ್ ಕರೀಮ್ ಸಾಬ್, ದೇವಿಹೊಸೂರು, ಮತ್ತು ಆತನ ಕುಟುಬದವರು ಹಲ್ಲೆ ನಡೆಸಿದ್ದಾರೆ.
ಸುಲೆಮಾನ್ ಪತ್ನಿ ನೂರ್ಜಹಾನ್ ಕಳೆದ 2 ವರ್ಷದ ಹಿಂದೆ 3 ಲಕ್ಷ ಸಾಲ ಪಡೆದುಕೊಂಡಿದ್ದರು. 8 ತಿಂಗಳಾದರೂ ಮರುಪಾವತಿ ಮಾಡದೆ. ಸಾಲ ಮರುಪಾವತಿ ಮಾಡುವಂತೆ ನೂರ್ಜಹಾನ್ ರಿಗೆ ಮೇಲ್ವಿಚಾರಕಿ ಗೌರಮ್ಮಾ ಕೇಳಿಕೊಂಡಿದ್ದಾರೆ.! ಮನೆಗೆ ಬನ್ನಿ ಮರುಪಾವತಿ ಮಾಡುತ್ತೆನೆ ಎಂದು ಕರೆಸಿ ಮಾತುಕತೆ ಸಂದರ್ಭದಲ್ಲಿ ಮನೆ ಬಾಗಿಲನ್ನು ಲಾಕ್ ಮಾಡಿಕೊಂಡು, ಗೌರಮ್ಮ ಮೇಲೆ ಸುಲೆಮಾನ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕಾಏಕಿ ಕುರ್ಚಿಯಿಂದ ಹಲ್ಲೆ ಮಾಡಿದ್ದಾನೆ . ಬಿಡಿಸಲು ಬಂದ ವಿಕ್ಷಣಾಧಿಕಾರಿ ಗಣೇಶ್ ಕಡಗೋಡ್ ಇವರನ್ನು ಕೂಡ ಕುಟುಂಬಸ್ಥರು ಸೇರಿಕೊಂಡು ಥಳಿಸಿದ್ದಾರೆ. ಮಹಿಳೆ ಮೇಲೆ ನಡೆಸಿರುವ ದೈಹಿಕ ಹಲ್ಲೆ ಕುರಿತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡರಾದ ಸಿದ್ಧಲಿಂಗಪ್ಪ ಕಮಡೊಳ್ಳಿ ಆಗ್ರಹಿಸಸಿದ್ದಾರೆ.! ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದತೆ 5 ಜನರ ಮೇಲೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ಸುಲೆಮಾನ್ ದೇವಿಹೊಸೂರ್ ನನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.
