ರಾಯಚೂರು : ರಾಜ್ಯಾದ್ಯಂತ ವಾಡಿಕೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮವಾಗಿ ನೆರೆಹಾನಿಗೆ ರೈತ ಬೆಳೆದ ಬೆಳೆ ನಾಶವಾಗಿದೆ. ಅಳಿದುಳಿದ ಬೆಳೆಯನ್ನು ಕಾಪಾಡಿಕೊಳ್ಳಲು ರೈತ ಪರದಾಡುತ್ತಿದ್ದಾನೆ. ಇತ್ತ ಅಧಿಕಾರಿಯ ಬೇಜವಾಬ್ದಾರಿತನಕ್ಕೆ ಅತ್ತ ಅನ್ನದಾತರು ಕಂಗಾಲಾಗಿ ಕುಳಿತಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಸವ ಸಾಗರ್ ಜಲಾಶಯ ಭರ್ತಿಯಾದ ಪರಿಣಾಮ, ಈ ಭಾಗದ ಬಹುತೇಕ ಭೂಮಿ ಕೆಂಪು ಮಣ್ಣಿನಿಂದ ಕೂಡಿದೆ. ಆದರೆ ಕೆಬಿಜೆಎನ್ ಎಲ್ ಅಧಿಕಾರಿಗಳು ಅವೈಜ್ಞಾನಿಕವಾಗಿ ವಾರ ಬಂಧಿ ಮೂಲಕ ಕಾಲುವೆಗಳಿವೆ ನೀರನ್ನು ಹರಿಸುತ್ತಿದ್ದಾರೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಬೆಳೆಗಳಿಗೆ ನೀರು ಸಿಗದೇ ಬೆಳೆಗಳು ಒಣಗಿಹೋಗುತ್ತಿವೆ. ರಾಂಪುರ ಏತ ನೀರಾವರಿ ಕಾಲುವೆಗೆ 14 ದಿನಗಳವರೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಸಹಾಯಕ ಆಯುಕ್ತ ಬಸವಣ್ಣೆಪ್ಪ ಕುಲಶೆಟ್ಟಿ ಅವ್ರಿಗೆ ಒತ್ತಾಯಿಸಿದ್ದಾರೆ.
