
ಹಾವೇರಿ: ಹಾವೇರಿಯ ಬೈರಾಪುರ ಗ್ರಾಮದಲ್ಲಿ ಸಂಪೂರ್ಣವಾಗಿ ದುರಸ್ತಿಯಾಗಿರುವ ಅಂನವಾಡಿ ಕಟ್ಟಡವನ್ನು 6 ವರ್ಷಗಳು ಕಳೆದರೂ ಹೊಸ ಕಟ್ಟಡದ ನಿರ್ಮಾಣದ ಭಾಗ್ಯವಿಲ್ಲದಂತಾಗಿದೆ. ಪುಟ್ಟ ಮಕ್ಕಳ ಜಿತೆ ದಿನವಿಡೀ ಬಯಲಲ್ಲಿ ಬಿಸಿಲ ಬೇಗೆಯಲ್ಲೇ ಬೋಧನೆ ಮಾಡುತ್ತಿರುವ ಅಂಗನವಾಡಿ ಸಹಾಯಕಿಯರು. ಗ್ರಾಮದ ಸ್ಥಳಿಯ ಶಾಸಕರೂ ಇತ್ತ ಗಮನ ಹರಿಸದೆ ಕಣ್ಮುಚ್ಚಿ ಕುಳಿತಿದ್ದಾರೆ, ತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡದ ಸ್ಥಳೀಯ ಶಾಸಕರೇ ಇತ್ತ ಕೊಂಚ ಗಮನ ಹರಿಸಿ, ಒಂದು ಕಟ್ಟಡದ ವ್ಯವಸ್ಥೆಯಿಲ್ಲದೆ, ಮೂಲಸೌಕರ್ಯಗಳಾದ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ, ಯಾವಾಗಲಾದರೂ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ ಮಕ್ಕಳು- ಸಹಾಯಕಿಯರು ದುರಸ್ತಿ ಹೊಂದಿದ ಕಟ್ಟಡದಲ್ಲಿ ಬೋಧನೆ ಮಾಡಲು ಹಿಂದೇಟು ಹಾಕುತಿದ್ದಾರೆ.ಇನ್ನಾದರೂ ಸಂಬಂಧಪಟ್ಟ ಸ್ಥಳೀಯ ಶಾಸಕರು ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಸಹಾಯಕಿಯರು ಮನವಿ ಮಾಡಿಕೊಂಡಿದ್ದಾರೆ.
