ಚಿತ್ರದುರ್ಗ : ಚಿತ್ರದುರ್ಗದ ನಾಯಕನಹಟ್ಟಿ ಪಟ್ಟಣದ ವೀರಶೈವ ಆಗಮ ವೇದ, ಸಂಸ್ಕೃತ ಪಾಠಶಾಲೆಯಲ್ಲಿ ವೇದ ಪಠಣ ನಡೆಯುತ್ತಿರುವಂತಹ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿ ಮೇಲೆ ಶಿಕ್ಷಕ ವೇದ ಪಠಣೆ ಮಾಡಿಸುವ ಸಂದರ್ಭದಲ್ಲಿ ವಿದ್ಯಾರ್ಥಿ ಮೇಲೆ ಕೃತ್ಯವೆಸಗಿದ್ದಾನೆ. ಧಾರ್ಮಿಕ ಸ್ಥಳ ಮತ್ತು ಪಟ್ಟಣ ಗುರು ತಿಪ್ಪೇರುದ್ರಸ್ವಾಮಿ ದೇವಾಲಯವು ರಾಜ್ಯದಲ್ಲಿ ʼಎʼ ಗ್ರೇಟ್ ಮಾನ್ಯತೆಯನ್ನು ಪಡೆದಿರುವಂತಹ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವೇಧಾಭ್ಯಾಸ ಮಾಡುತ್ತಿದ್ದು, ವೀರಶೈವ ಸಂಸ್ಕೃತ ವೇದ ಪಠಣಾ ಶಾಲೆಯಲ್ಲಿ ಗುರು ತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯದ ಹಿಂಭಾಗದಲ್ಲಿರುವ ದಾಸೋಹ ಭವನದ ಮೇಲಿರುವ ವಿಶಾಲವಾದ ಕೊಠಡಿಯಲ್ಲಿ ಸಂಜೆ ಸಂಸ್ಕೃತ ವೇದ ಪಾಠಶಾಲೆಯ ಶಿಕ್ಷಕ ವಿದ್ವಾನ್ ವೀರೇಶ್ ಹಿರೇಮಠ ಅವರು ವೇದಾಭ್ಯಾಸ ನಡೆಯುತ್ತಿರುವಂತಹ ಸಂದರ್ಭದಲ್ಲಿ ವಿದ್ಯಾರ್ಥಿಗೆ ವೇದ ಪಠಣೆ ಮಾಡುವಂತಹ ಸಂದರ್ಭದಲ್ಲಿ ವಿದ್ಯಾರ್ಥಿ ತಪ್ಪಾಗಿ ಹೇಳಿದ್ದಾನೆ ಎಂದು ಶಿಕ್ಷಕನು ಪುಟ್ಟ ಬಾಲಕನ ಮೇಲೆ ಮಾನವೀಯತೆ ಭಾವನೆಯನ್ನು ಮರೆತು, ಶಿಕ್ಷಕನ ವೃತ್ತಿಯನ್ನು ಮರೆತು ಹಿಗ್ಗಾ-ಮುಗ್ಗಾ ಥಳಿಸಿದ್ದಾನೆ. ಶಿಕ್ಷಕನು ವಿದ್ಯಾರ್ಥಿ ಮೇಲೆ ಮನಬಂದಂತೆ ಥಳಿಸುವ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಟ್ಟಣದ ಸಾರ್ವಜನಿಕರು ದೇವಾಲಯದ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ ರವರಿಗೆ ಕರೆ ಮಾಡಿದರೆ, ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಈ ಪ್ರಕರಣ ಸಂಬಂಧ ದೇವಾಲಯದ ಕಾರ್ಯ ನಿರ್ವಾಹಣಾಧಿಕಾರಿ ಗಂಗಾಧರಪ್ಪ, ಸ್ಥಳಕ್ಕೆ ಭೇಟಿ ನೀಡಿ ಮುಖ್ಯ ಶಿಕ್ಷಕ ವೀರೇಶ್ ವೀರೇಮಠ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತೇವೆ ಎಂದು ನಾಯಕನಹಟ್ಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.
