
ಬೆಂಗಳುರು: ಇಂದು ನಾಡಿನ ಎಲ್ಲೆಡೆ ಬೆಳಕಿನ ಹಬ್ಬವಾದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಳಕಿನ ಹಬ್ಬವಾದ ದೀಪಾವಳಿ ಹಬ್ಬದ ದಿನವೇ ಕೆಲವರ ಜೀವನದಲ್ಲಿ ಆವರಿಸಿದ ಕತ್ತಲೆ, ಹೌದು, ಇಂದು ಎಲ್ಲೆಡೆ ಬೆಳಕಿನ ಹಬ್ಬವನ್ನು ಆಚರಿಸಲಾಗುತ್ತಿದೆ. ಬೆಂಗಳೂರಿನ ಹಲವೆಡೆ ಬೆಳಕಿನ ಹಬ್ಬದ ಸಂಭ್ರಮದಲ್ಲಿ ಸಾರ್ವಜನಿಕರು ಕುಟುಂಬ, ಸ್ನೇಹಿತರು ಸೇರಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದರ ನಡುವೆ ಪಟಾಕಿ ಸಿಡಿಸಿ ತಮ್ಮ ಜೀವನದ ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವಾಗ ಸುರಕ್ಷತೆಯಿಂದಿರುವುದು ಮುಖ್ಯ.
ಪಟಾಕಿ ಸಿಡಿಸುವಂತಹ ಸಂದರ್ಭದಲ್ಲಿ ಹಲವಾರು ಘಟನೆಗಳು ಸಂಭವಿಸುತ್ತವೆ. ಅಂತಹ ದುರ್ಘಟನೆಯೊಂದು ಬೆಂಗಳೂರಿನ ಹಲವು ಸ್ಥಳಗಳಲ್ಲಿ ನಡೆಯುತ್ತಿದೆ.ನಿನ್ನೆ ರಾತ್ರಿ ವೇಳೆ ನಗರದಲ್ಲಿ ಪಟಾಕಿ ಸಿಡಿಸುವ ವೇಳೆ ಇಬ್ಬರ ಬಾಳಲ್ಲಿ ಕತ್ತಲೆ ಆವರಿಸಿದೆ.ರಸ್ತೆಯಲ್ಲಿ ನಡೆದು ಹೋಗುತ್ತಿದ್ದಂತಹ ಸಂದರ್ಭದಲ್ಲಿ 47 ವರ್ಷದ ಮಹಿಳೆಯೊಬ್ಬರ ಮೇಲೆ ಆಟಮ್ ಬಾಂಬ್ ಸಿಡಿದು ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ.ಮತ್ತೊಂದೆಡೆ ಪಟಾಕಿ ಸಿಡಿಸಲು ಹೋಗಿ 14 ವರ್ಷದ ಬಾಲಕನ ಕಣ್ಣಿನ ಭಾಗಕ್ಕೆ ತೀವ್ರ ಗಾಯವಾಗಿದ್ದು, ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಈಗಾಗಲೇ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿರುವ ಮಿಂಟೋ ಆಸ್ಪತ್ರೆಯು, ಹಬ್ಬ ಆರಂಭದ ಎರಡೇ ದಿನಗಳಲ್ಲಿ ಸುಮಾರು 11 ಪ್ರಕರಣಗಳು ದಾಖಲಾಗಿದ್ದು, ಏಳು ವಯಸ್ಕರು ಮತ್ತು 4 ಮಕ್ಕಳು ಸೇರಿ ಗಂಭೀರ ಗಾಯಗೊಂಡಿದ್ದು, ಜನರಿಗೆ ಸಣ್ಣ-ಪುಟ್ಟ ಗಾಯಗಳು ಸಂಭವಿಸಿದೆ, ಎಂದು ಆಸ್ಪತ್ರೆಯ ವರದಿ ತಿಳಿಸಿದೆ
