ಕೊಡಗು:ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಗಲ್ಲಿಗೇರಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರಾದ ಗುಡ್ಡೆಮನೆ ಅಪ್ಪಯ್ಯಗೌಡರವರು. ಅಮರ ಸುಳ್ಯದ ಹೋರಾಟಗಾರ ಅಪ್ಪಯ್ಯಗೌಡರ ತ್ಯಾಗ ಬಲಿದಾನವನ್ನು ನೆನೆದು ಸ್ಮರಿಸಿದ ಜನತೆ.
183 4ರಲ್ಲಿ ಬ್ರಿಟಿಷರು ಕೊಡಗನ್ನು ಆಕ್ರಮಿಸಿಕೊಂಡು ಆಳುತ್ತಿದ್ದ ಚಿಕ್ಕವೀರರಾಜನನ್ನು ಪದಚ್ಯುತಿಗೊಳಿಸಿ ಗಡಿಪಾರು, ಮಾಡಿದರು. ಇದರಿಂದ ಸಿಟ್ಟಿಗೆದ್ದ ರಾಜರ ಸೇನೆಯಲ್ಲಿ ಸುಬೇದಾರ್ ಆಗಿದ್ದ ಅಪ್ಪಯ್ಯ ಗೌಡರು ಹೋರಾಟದ ಹಾದಿಯನ್ನು ಹಿಡಿದರು. ಸ್ವತಃ ಸ್ವಂತ ಸೇನೆ ಕಟ್ಟಿ ಮಹಾದಂಡನಾಯಕನಾಗಿ ಬ್ರಿಟೀಷರ ಹಿಡಿತದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯನ್ನು ಬ್ರಿಟೀಷರಿಂದ ಬಿಡುಗಡೆಗೊಳಿಸಲು ಮುಂದಾದಂತಹ ಸಂದರ್ಭದಲ್ಲಿ ಸೆರೆಸಿಕ್ಕರು. 4 5 ವರ್ಷದ ಅಪ್ಪಯ್ಯ ಗೌಡರನ್ನು 1837ರ ಅ.31ರಂದು ಮಡಿಕೇರಿ ಕೋಟೆಯ ಮುಂಭಾಗ ಬಹಿರಂಗವಾಗಿ ಗಲ್ಲಿಗೇರಿಸಿದರು. ಈ ದಿನವನ್ನು ಕೊಡಗು ಜಿಲ್ಲೆಯಲ್ಲಿ ಸಂಸ್ಮರಣಾ ದಿನವಾಗಿ ಆಚರಿಸಲಾಗುತ್ತಿದೆ. ನಗರದ ಸುದರ್ಶನದ ವೃತ್ತದಲ್ಲಿರುವ ಗುಡ್ಡೆಮನೆ ಅಪ್ಪಯ್ಯಗೌಡರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ, ವಿವಿಧ ಕಲಾತಂಡಗಳಿಂದ ಕಾರ್ಯಕ್ರಮವನ್ನು ನೆರವೇರಿಸಿದರು.ಕಾರ್ಯಕ್ರಮದಲ್ಲಿ ಶಾಸಕರುಗಳಾದ ಎ ಎಸ್ ಪೊನ್ನಣ್ಣ, ಮಂತರ್ ಗೌಡ, ಮಾಜಿ ಸ್ಪೀಕರ್ ಕೆ ಜಿ ಬೋಪಯ್ಯ, ಕೊಡಗು ಡಿಸಿ, ಎಸ್ಪಿ ಸೇರಿದಂತೆ ಅರೆಭಾಷೆ ಅಕಾಡೆಮಿಯ ಅಧ್ಯಕ್ಷರು, ಸದಸ್ಯರು ಹಾಗೂ ಅರೆಭಾಷೆ ಸಮುದಾಯ ಬಾಂಧವರು ಭಾಗವಹಿಸಿದ್ದರು.
