


ಹುಬ್ಬಳ್ಳಿ : ಆರ್ಟಿಐ ಕಾರ್ಯಕರ್ತರಿಂದ ಕೋ-ಆಪರೇಟೀವ್ ಬ್ಯಾಂಕ್ಗಳ ಸರ್ಕಾರಿ ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ಗ್ಯಾಂಗ್ ಬಂಧನ. ಹುಬ್ಬಳ್ಳಿಯಲ್ಲಿ ಕೋ-ಆಪರೇಟೀವ್ ಬ್ಯಾಂಕುಗಳು ಗ್ಯಾಂಗ್ ಕಟ್ಟಿಕೊಂಡು ಸಮೃದ್ಧಿ ಕೋ-ಆಪರೇಟೀವ್ ಬ್ಯಾಂಕ್ನಲ್ಲಿ ಬರೋಬ್ಬರಿ 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಅಡ್ವಾನ್ಸ್ ಹಣ ಪಡೆಯುತ್ತಿರುವ ವೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ. ಸಮೃದ್ಧಿ ಕೋ-ಆಪರೇಟೀವ್ ಸೊಸೈಟಿ ದೂರಿನ ಆಧಾರದ ಮೇರೆಗೆ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಗದಗದ ಮಂಜುನಾಥ ಹದ್ದಣ್ಣ, ಮುಂದಗೋಡದ ವೀರೇಶ್ ಲಿಂಗದಾಳ ಮತ್ತು ಮಹಾದೇವ ಲಿಂಗದಾಳ ಎಂದು ಗುರುತಿಸಲಾಗಿದೆ. ಈ ಪ್ರಕರಣ ಸಂಬಂಧ ನಾಲ್ಕು ಆರೋಪಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಬಂಧಿಸಲು ಮುಂದಾದ ಪೊಲೀಸ್.
