ದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಐ ೨೦ ಕಾರಿನಲ್ಲಿ ಸ್ಫೋಟಕವನ್ನಿಟ್ಟು ಕಾರನ್ನು ಸ್ಫೋಟ ,
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸೇರಿ ಅಕ್ಕ ಪಕ್ಕದ ಕಾರುಗಳಿಗೂ ಹಾನಿಯಾಗಿದೆ. ದಿಲ್ಲಿಯಲ್ಲಿ ನಡೆದ ಸ್ಪೋಟಕ್ಕೆ ೯ ಜನ ಬಲಿಯಾಗಿದ್ದಾರೆ.
ಐತಿಹಾಸಿಕ ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ ಐ೨೦ ಕಾರು ಭೀಕರ ಸ್ಫೋಟಕ್ಕೆ ೯ ಜನ ಮೃತಪಟ್ಟಿದ್ದು, ೨೦ ಜನರು ಗಂಭೀರ ಗಾಯಗೊಂಡಿದ್ದಾರೆ. ಸ್ಫೋಟದಲ್ಲಿ 2,9000 ಕೆಜಿ ಅಮೋನಿಯಂ ನೈಟ್ರೇಟ್ನ್ನು ವಶಕ್ಕೆ ಪಡೆದು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಸ್ಫೋಟ ಕೃತ್ಯಕ್ಕೆ ಭಾಗಿಯಾಗಿದ್ದ 30 ಟೆರರ್ ಡಾಕ್ಟರ್ ಸೇರಿ ೧೧ ಉಗ್ರನ್ನು ಬಂಧನ ಮಾಡಲಾಗಿದೆ. ಕಾರು ಸ್ಫೊಟದ ತೀವ್ರತೆಗೆ ಅಕ್ಕ-ಪಕ್ಕದ ಹಲವು ಕಾರಿಗಳು ಹೊತ್ತಿ ಉರಿದಿವೆ.
ದೆಹಲಿಯ ಕೆಂಪು ಕೋಟೆಯ ಬಳಿ ಸುಮಾರು ಸಂಜೆ 6.52ರ ಸುಮಾರಿಗೆ ಐ ೨೦ ಕಾರಿನಲ್ಲಿ ಬಂದ ಉಗ್ರರಿಂದ ಸ್ಪೋಟಗೊಂಡ ಪರಿಣಾಮ ಕಾರು ಹೊತ್ತಿ ಉರಿದಿದೆ. ಅಲ್ಲದೆ ಅಕ್ಕ-ಪಕ್ಕದ ಕಾರುಗಳು ಹೊತ್ತಿ ಉರಿದಿವೆ. ಘಟನೆ ನಡೆದ ೮ ನಿಮಿಷದಲ್ಲಿ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ಘಟನೆಯಲ್ಲಿ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸಂಜೆ ಸುಮಾರು 7:29ಕ್ಕೆ ಅಗ್ನಿಶಾಮಕ ದಳದವರು ದೌಢಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡುತ್ತಿದ್ದಾರೆ, ಗಂಭೀರಗೊಂಡ ಗಾಯಾಳುಗಳ ಪರಿಸ್ಥಿತಿ ಸಾವು- ನೋವಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಸ್ಫೋಟದ ಮಾಹಿತಿ ಕುರಿತು ಆಕಸ್ಮಿಕವೇ ಅಥವಾ ಉಗ್ರರ ಕೃತಯವೇ ಎಂಬುದು ಖಚಿತಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಸ್ಫೋಟಕಕ್ಕೆ ಬಳಸಿದ ಕಾರನ್ನು ಪರಿಶೀಲಿಸಿದಾಗ ಹರಿಯಾಣ ಮೂಲದ ವ್ಯಕ್ತಿಗೆ ಸೇರಿದ ವಾಹನ ಇದಾಗಿದ್ದು, ಸಲ್ಮಾನ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇಲಾಖೆ ತಂಡ ಮತ್ತು ವಿದಿ-ವಿಜ್ಞಾನ ತಜ್ಞರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಪ್ರಧಾನಿ ಮೋದಿ ಅವರು ಅಮಿತ್ ಶಾ ಅವರನ್ನು ಸಂಪರ್ಕಿಸಿ ಘಟನೆ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
