
ಮಂಡ್ಯ: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾದ ಪರಿಣಾಮವಾಗಿ ಸರ್ಕಾರದಿಂದ ಹಲವಾರು ನಬಿಯಮ ಜಾರಿಮಾಡಿದ್ದು, ಅಲ್ಲದೆ ಬೀದಿ ನಾಯಿ ಹಾವಳಿ ಸೇರಿ ಆಕ್ರಮಣದ ಕುರಿತು ಕಠಿಣ ಕ್ರಮಗಳನ್ನು ಜಾರಿ ಮಾಡಲಾಗಿದೆ. ಅದಲ್ಲದೆಯೂ ಬೀದಿ ನಾಯಿಗಳು ನಿಯಂತ್ರಣಕ್ಕೆ ತರುವಲ್ಲಿ ಹಲವು ಅಭಿಯಾನ, ಯೋಜನೆಗಳನ್ನು ರೂಪಿಸಿದೆ. ಇದೇ ರೀತಿ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಮಸ್ಯೆ ಅತ್ಯಂತ ಗಂಭಿರವಾಗಿದೆ. ಕಳೆದ 2 ವರ್ಷ 9 ತಿಂಗಳಿನಿಂದ 61,208 ಜನರಿಗೆ ಬೀದಿ ನಾಯಿಗಳು ಆಕ್ರಮಣ ಮಾಡಿವೆ , ಮಂಡ್ಯ ತಾಲ್ಲುಕಿನಲ್ಲಿ ಸುಮಾರು 13,849 ಪ್ರಕರಣಗಳು ದಾಖಲಾಗಿವೆ. ನಾಯಿಗಳ ದಾಳಿ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ, ಇದರಿಂದ ಪುಟ್ಟ ಮಕ್ಕಳು ಸೇರಿ ವಯಸ್ಕರು ವೃದ್ಧರು ದಾಳಿಗೆ ಒಳಪಡುತ್ತಿದ್ದಾರೆ.
ಇದನ್ನು ನಿಯಂತ್ರಣ ತರುವಲ್ಲಿ 2025-26ನೇ ಸಾಲಿನ ಹಣಕಶು ವರ್ಷದಲ್ಲಿ 5,000 ಬೀದಿನಾಯಿಗಳ ಸಂತಾನ ಶಕ್ತಿಹರಣ ಮತ್ತು ರೇಬಿಸ್ ಲಸಿಕೆಯಡಿ ತರಲು ನಿಗದಿಪಡಿಸಲಾಗಿದೆ. ಮಂಡ್ಯ ನಗರಸಭೆ 60ಲಕ್ಷ ರೂಪಾಯಿ ವೆಚ್ಚದಲ್ಲಿ ಸುಮಾರು 3,00 ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಚಿಕಿತ್ಸೆ ನಂತರ 15ದಿನಗಳ ಆರೋಗ್ಯ ನಿಗಾ ವಹಿಸಿ ನಂತರ ಆಯಾ ಸ್ಥಳಗಳಿಗೆ ಸುರಕ್ಷಿತವಾಗಿ ರವಾನಿಸಲಾಗುತ್ತದೆ.
ಆಸ್ಪತ್ರೆಗಳಲ್ಲಿ ಪ್ರತಿ ದಿನ ನಾಯಿ ಕಡಿತದಿಂದ ಹೊಸ ಪ್ರಕರ ಣಗಳು ದಾಖಲಾಗುತ್ತಿವೆ. ಅವುಗಳ ಪೈಕಿ ಅತೀ ಹೆಚ್ಚು ಮಕ್ಕಳನ್ನು ಒಳಗೊಂಡಿವೆ. ಇತ್ತ ಮಂಡ್ಯ ಜಿಲ್ಲೆ ಅಲ್ಲದೆ ಹಲವಾರು ಕಡೆಗಳಲ್ಲಿ ನಾಯಿಗಳು ಮುಕ್ತವಾಗಿ ಓಡಾಡಿಕೊಂಡಿವೆ ಕಂಡ ಕಂಡ ಕಡೆಯಲ್ಲೆಲ್ಲ ಸಾರ್ವಜನಿಕರ ಮೇಲೆ ಆಕ್ರಮಣ ಮಾಡಲು ಮುಂದಾಗುತ್ತಿವೆ. ಇದರಿಂದ ಪೋಷಕರು, ನಿವಾಸಿಗಳಲ್ಲಿ ಆತಂಕ ಹೆಚ್ಚುತ್ತಿದ್ದು, ಹೊರ ಬರಲು ಭಯಭಿತರಾಗಿದ್ದಾರೆ.
ಇಂತಹ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಜಿಲ್ಲಾ ಅಧಿಕಾರಿಗಳು ಹಲವಾರು ಸೂಚನೆಗಳನ್ನು ನೀಡುತ್ತಿದ್ದರೂ, ಪ್ರಾಣಿಗಳಿಗೆ ಜನನ ನಿಯಂತ್ರಣ ಮತ್ತು ರೇಬಿಸ್ ವಿರೋಧಿ ಲಸಿಕೆ ಕಾರ್ಯಕ್ರಮಗಳ ಅಡಿಯಲ್ಲಿ 5,000 ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದಾರೆ.
