
ಬೆಂಗಳೂರು: ಸಿಎಂ ಸಿದ್ಧರಾಮಯ್ಯ ನ.15ರಂದು ದೆಹಲಿಗೆ ಭೇಟಿ ನೀಡಿದ ಸಿಎಂ ಸಿದ್ಧರಾಮಯ್ಯ ದೆಹಲಿಯಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆ ಕುರಿತು ನಾಯಕತ್ವ ಬದಲಾವಣೆ ಕುರಿತು ಚರ್ಚಿಸಿದ್ದಾರೆ. ಚರ್ಚೆಯಲ್ಲಿ ಸಂಪುಟ ಪುನಾರಚನೆ ಕುರಿತು,ನೇಮಕಾತಿ-ಕಾರ್ಯದರ್ಶಿ ಬದಲಾವಣೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಇದೇ ವಿಚಾರವಾಗಿ ಸಂಪುಟ ಸಭೆ ಪುನಾರಚನೆ ಕುರಿತು ರಾಹುಲ್ ಗಾಂಧಿ ಒಪ್ಪಿಗೆ ನೀಡಿದ್ದು, ಕರ್ನಾಟಕದಲ್ಲಿ ಬಲಿಷ್ಟ ಸರ್ಕಾರ ರಚಿಸುವಲ್ಲಿಇದು ಪ್ರಮುಖ ಗತಿ ನೀಡಲಿದೆ.ಕರ್ನಾಟಕದ ಮುಖ್ಯಮಂತ್ರಿ ಕ್ಯಾಬಿನೆಟ್ ಪುನಾರಚನೆ ಕುರಿತು ಮಾತನಾಡಲು ಅನುಮತಿ ಕೋರಿದ್ದ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಜೊತೆ ಮಾತನಾಡಿ ಕರ್ನಾಟಕದಲ್ಲಿ ಸಂಪುಟ ಪುನರ್ರಚನೆ ಕುರಿತು ಹೈಕಮಾಂಡ್ ನುಮತಿ ನೀಡಿದ್ದು, ಸರ್ಕಾರದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ

- ರಾಜ್ಯದ ಕೆಲವು ಅಭಿವೃಧ್ದಿ ಮತ್ತ ಆಡಳಿತ ಸುಧಾರಣೆ ಸಂಬಂಧ ಹೊಸ ತಂತ್ರ-ಯೋಜನೆ ಮೂಲಕ ಖುರ್ಚಿಯನ್ನು ಬಲಪಡಿಸಿಕೊಳ್ಳಲು ಚರ್ಚೆ ಮಾಡಲಾಯಿತು.
- ಅಲ್ಲದೆ ಮುಂಬರುವ ರಾಜಕೀಯ ಬದಲಾವಣೆ ಮತ್ತು ವಿಧಾನಸಭೆ ಚುನಾವಣೆಗೆ ತಂತ್ರಗಾರಿಕೆಗಳನ್ನು ರೂಪಿಸುವಲ್ಲಿ ಮಹತ್ವಪೂರ್ಣ ನಿರ್ಧಾರಗಳನ್ನು ಕುರಿತು ಚರ್ಚೆ.
- ಸರ್ಕಾರದಲ್ಲಿ ಆಂತರಿಕ ಕಲಹ ಏರ್ಪಟ್ಟ ಕಾರಣ ಪಕ್ಷದ ಸಚಿವರು ಸದಸ್ಯರು, ಶಾಸಕರ ನಡುವಿನ ಸ್ಥಾನ ಬದಲಾವಣೆ ಹಂಚಿಕೆಗಳು ತಮ್ಮಲ್ಲಿರುವ ಒಗ್ಗಟ್ಟು ಒಡೆಯುತ್ತಿರುವುದರಿಂದ ಆಂತರಿಕ ಕಲಹಗಳನ್ನು ಸರಿಪಡಿಸಿ, ಒಗ್ಗಟ್ಟನ್ನು ಬಲಪಡಿಸಲು ಕೆಲವು ಮಾರ್ಗಸೂಚಿಗಳ ಕುರಿತು ಚರ್ಚಿಸಿದ್ದಾರೆ.
- ರಾಜ್ಯದಲ್ಲಿ ರಸ್ತೆ ಸಮಸ್ಯೆ, ರೈತರ ಬೆಂಬಲ ಬೆಲೆ ನಿಗಧಿ, ಮಹಿಳಾ ಸಬಲೀಕರಣ, ಸಾರಿಗೆ ಅಭಿವೃದ್ಧಿ ಸೇರಿ ಹಲವು ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆ ಕುರಿತು ತಕ್ಕ ಪರಿಹಾರ ನೀಡುವಂತೆ ನಿರ್ಧಾರ.
- ಸಾಮಾಜಿಕ ನ್ಯಾಯ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಅಭಿವೃದ್ದಿ.
- ಕೃಷಿ ಕ್ಷೇತ್ರಕ್ಕೆ ಪರಿಹಾರ ಮತ್ತು ಬೆಂಬಲ ನೀಡುವ ಕುರಿತು ಕೇಂದ್ರದ ಹಸ್ತಾಂತರಕ್ಕಾಗಿ ಒತ್ತಾಯ ಮಾಡುವುದು. ಆರೋಗ್ಯ ಸೇವೆಗಳು ಮತ್ತು ಮೂಲಸೌಲಭ್ಯಗಳ ಹೆಚ್ಚಳ ಹಾಗೂ ವಿಶ್ವಾಸಾರ್ಹತೆಗೆ ಸಂಬಂಧಿಸಿದ ಯೋಜನೆಗಳಿಗೆ ಅನುಮೋದನೆ ನೀಡುವುದು.
- ಈ ಎಲ್ಲಾ ನಿರ್ಧಾರಗಳು ಕರ್ನಾಟಕದ ಆರ್ಥಿಕ, ಸಾಮಾಜಿಕ , ಶೈಕ್ಷಣಿಕ ,ರಾಜಕೀಯ ಬೆಳವಣಿಗೆಗೆ ಪ್ರಮುಖ ಮಾರ್ಗದರ್ಶಕವಾಗಿದ್ದು, ರಾಜ್ಯದ ಜನತೆಗೆ ಒಳಿತಾಗುವ ನಿಟ್ಟಿನಲ್ಲಿ ಮಿತ್ರಪಕ್ಷಗಳೊಂದಿಗೆ ಚರ್ಚೆ ನಡೆಸಿ ಜಾರಿಗೆ ತರಲಾಗುತ್ತದೆ ಎಂದು ಮಾತನಾಡಿದ್ದಾರೆ.
