
ಬೆಂಗಳೂರು: ಸದ್ಯ ರಾಜ್ಯದಲ್ಲಿ ಕುತೂಹಲ ಮತ್ತು ಗೊಂದಲ ಮೂಡಿಸುತ್ತಿರುವ ಸಚಿವ ಸಂಪುಟ ಪುನಾರಚನೆ , ನವೆಂಬರ್ ಕ್ರಾಂತಿ ನಡೆಯುತ್ತಾ ಇಲ್ಲವಾ ಎಂಬ ಮಾತುಗಳು ರಾಜ್ಯ ಕಾಂಗ್ರೆ ಸ್ ಸರ್ಕಾರದಲ್ಲಿ ಒಳಗೊಳಗೆ ಸಿಎಂ-ಡಿಸಿಎಂ, ಸಚಿವರ ನಡುವೆ ಸ್ಥಾನ ಬದಲಾವಣೆ ಕುರಿತು ಚರ್ಚೆಯಾಗುತ್ತಿತ್ತು.
ಕನೆಗೂ ಇದಕ್ಕೆಲ್ಲ ತೆರೆ ಎಳೆಯಲು ಇಂದು ಸಿಎಂ ದೆಹಲಿಯಲ್ಲಿ ಖರ್ಗೆ ಜೊತೆ ಮಾತನಾಡಲು ತೆರಳಿದ್ದು, ಇಂದು ಎಐಸಿಸಿ ಅಧ್ಯಕ್ಷ ಖರ್ಗೆ ಜೊತೆ ಮಾತನಾಡಿ ತೀರ್ಪನ್ನು ನೀಡಲಿದ್ದಾರೆ.
ಸದ್ಯ ಅತ್ತ ಹೈಕಮಾಂಡ್ ರಾಹುಲ್ ಜೊತೆ ಚರ್ಚಿಸಿದಾಗ ರಚನೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಖರ ್ಗೆ ಜೊತೆ ಚರ್ಚಿಸಿ ಎಂದು ತಿಳಿಸಿದರು. ರಾಹುಲ್ ಒಪ್ಪಿಗೆ ನಂತರ ಇಂದು ಖರ್ಗೆ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದು, ಸದ್ಯ ಆಕಾಂಕ್ಷಿಗಳು ತಮ್ಮ ಖುರ್ಚಿಯನ್ನು ಭದ್ರಪಡಿಸಿಕೊಳ್ಳು ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಖರ್ಗೆ ಜೊತೆ ಮಾತನಾಡಲಿರುವ ಸಿದ್ದರಾಮಯ್ಯ, ಪುನಾರ ಚನೆ ಕುರಿತು ಸಂಬವಚನೀಯ ಪಟ್ಟಿ ಸಲ್ಲಿಕೆ ಸೇರಿ ಮುಂದಿನ ಪ್ರಕ್ರಿಯೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಇದೇ ವಿಚಾರವಾಗಿ ದೆಹಲಿಯಲ್ಲಿ ಸಚಿವರು ಬೀಡು ಬಿಟ್ಟಿರುವುದರಿಂದ ತಮ್ಮ ಖುರ್ಚಿಯನ್ನು ಭದ್ರಪಡಿಸಿಕೊಳ್ಳಲು ಹುದ್ದೆಯ ಆಕಾಂಕ್ಷಿಗಳಾದ ನರೇಂದ್ರಸ್ವಾಮಿ, ಬಿ.ನಾಗೇಂದ್ರ, ಬಿ.ಕೆ.ಹರಿಪ್ರಸಾದ್, ರೂಪಾ ಶಶಿಧರ್, ಅಪ್ಪಾಜಿ ನಾಡಗೌಡ\ಬಸವರ ಆಜ ರಾಯರೆಡ್ಡಿ, ಲಕ್ಷ್ಮಣ ಸವದಿ, ಟಿ.ಬಿ.ಜಯಚಂದ್ರ, ರಘುಮೂರ್ತಿ, ಸಲೀಂ ಅಹಮದ್,ಯು.ಟಿ.ಖಾದರ್, ಶಿವಲಿಂಗೇಗೌಡ ಮತ್ತು ಆರ್.ವಿ.ದೇಶಪಾಂಡೆ ಸೇರಿ ಹಲವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
