
ಬೆಂಗಳೂರು: ಲಾಲ್ಬಾಗ್ನಲ್ಲಿನ ಸಸ್ಯ ಸಂಪತ್ತಿನ ಉಳಿವಿವಿಗೆ, ಉದ್ಯಾನವನದ ಭದ್ರತೆ ಹಾಗೂ ಸಂರಕ್ಷಣೆ ಮೇಲೆ ರಾಜ್ಯ ಸರ್ಕಾರ ಗಂಭೀರವಾಗಿ ಗಮನ ಹರಿಸಿದೆ. ಇದರ ಹಿನ್ನೆಲೆ, ಲಾಲ್ಬಾಗ್ ಉದ್ಯಾನದಲ್ಲಿ ಮನರಂಜನಾ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಈಗಿನಿಂದ ಲಾಲ್ಬಾಗ್ನಲ್ಲಿ ಫೋಟೋಶೂಟ್, ವಿಡಿಯೋ ಶೂಟ್, ರೀಲ್ಸ್, ಮ್ಯಾರಥಾನ್, ಸೈಕ್ಲಿಂಗ್, ಸ್ಕೇಟಿಂಗ್ ಸೇರಿದಂತೆ ಹಲವು ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ವಾಕಿಂಗ್–ಜಾಗಿಂಗ್ ಮಾತ್ರಕ್ಕೆ ಅವಕಾಶ
ಹೊಸ ಆದೇಶದ ಪ್ರಕಾರ, ಬೆಳಿಗ್ಗೆ 5.:0 ರಿಂದ 9 ಗಂಟೆ ಹಾಗೂ ಸಂಜೆ 4:30ರಿಂದ 7 ಗಂಟೆಯವರೆಗೆ ಕೇವಲ ವಾಕಿಂಗ್ ಮತ್ತು ಜಾಗಿಂಗ್ಗೆ ಮಾತ್ರ ಅವಕಾಶವಿರಲಿದೆ. ಲಾಲ್ಬಾಗ್ ಪ್ರವಾಸಿಗರಿಗೆ ಮನರಂಜನಾ ಜಾಗವಲ್ಲ, ಸಸ್ಯ ಸಂಗ್ರಹಾಲಯ ಎಂಬ ಸಂದೇಶವನ್ನು ಸ್ಪಷ್ಟಪಡಿಸಲು ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸೈಕ್ಲಿಂಗ್, ಸ್ಕೇಟಿಂಗ್, ಯೋಗ ಸೇರಿ ಹಲವು ಚಟುವಟಿಕೆಗಳಿಗೆ ಬ್ರೇಕ್
ಉದ್ಯಾನವನದ ಗಿಡಗಳು, ಜೀನ್ ಬ್ಯಾಂಕ್ ಹಾಗೂ ಅಪರೂಪದ ಸಸ್ಯಪ್ರಭೇದಗಳ ಸಂರಕ್ಷಣೆ ಮುಖ್ಯ ಗುರಿ. ಆದ್ದರಿಂದ ಕೆಲವು ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಸಾಮೂಹಿಕ ಯೋಗ, ಸೈಕ್ಲಿಂಗ್, ಸ್ಕೇಟಿಂಗ್, ವಾಕಥಾನ್, ಮ್ಯಾರಥಾನ್ ಕಾರ್ಯಕ್ರಮಗಳು, ಹುಲ್ಲುಗಾವಲುಗಳಲ್ಲಿ ಆಟವಾಡುವುದು, ಸಾಕುಪ್ರಾಣಿಗಳನ್ನು ಕರೆತರುವುದು, ಮರ ಹತ್ತುವುದು, ರೆಂಬೆಗಳೊಂದಿಗೆ ಆಟವಾಡುವುದು, ಹೂವು, ಹಣ್ಣು ಕಿತ್ತುಕೊಳ್ಳುವುದು, ಪಕ್ಷಿಗಳು/ಮೀನುಗಳಿಗೆ ಆಹಾರ ನೀಡುವುದು, ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ತರುವುದು ಹೊರಗಿನ ಆಹಾರ, ಆಟಿಕೆಗಳು, ಬಲೂನ್ ತರುವುದು ಸೇರಿ ಇನ್ನಿತರ ಚಟುವಟಿಕೆಗಳಿಗೆ ಸರ್ಕಾರ ಬ್ರೇಕ್ ನೀಡಿದೆ.
ಫೋಟೋಶೂಟ್ಗಳಿಗೆ ಫುಲ್ ಸ್ಟಾಪ್
ಟಿವಿ ಧಾರಾವಾಹಿ–ಸಿನಿಮಾ ಚಿತ್ರೀಕರಣ, ರೀಲ್ಸ್, ಮ್ಯೂಸಿಕ್ ವಿಡಿಯೋ, ಮಾಡೆಲಿಂಗ್, ಪ್ರಿ–ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್, ಬೇಬಿ ಶವರ್ ಫೋಟೋಶೂಟ್ ಎಲ್ಲಕ್ಕೂ ನಿಷೇಧ ಜಾರಿಯಾಗಿದೆ. ಡ್ರೋನ್ ಛಾಯಾಗ್ರಹಣಕ್ಕೂ ಸಂಪೂರ್ಣ ನಿಷೇಧ. ಉದ್ಯಾನವನವನ್ನು ಪ್ರತಿದಿನ ಸಾವಿರಾರು ಜನರು ಭೇಟಿ ಮಾಡುವುದರಿಂದ, ಈ ರೀತಿಯ ಚಟುವಟಿಕೆಗಳು ಪರಿಸರಕ್ಕೆ ಹಾನಿ ಮಾಡುತ್ತಿದ್ದವು ಮತ್ತು ಭದ್ರತೆಗೆ ಅಡ್ಡಿಯಾಗುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಿಡ ನೆಡುವುದಕ್ಕೂ ನಿಯಂತ್ರಣ
ಲಾಲ್ಬಾಗ್ನಲ್ಲಿ ಹೊರಗಿನವರು ಸ್ವಯಂಪ್ರೇರಿತವಾಗಿ ಗಿಡ ನೆಡುವುದಕ್ಕೂ ಈಗಿನಿಂದ ಅವಕಾಶವಿಲ್ಲ. ಪರಿಸರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಕೇವಲ ಉದ್ಯಾನವನ ಇಲಾಖೆಯಿಂದ ಮುಂಚಿತ ಅನುಮತಿ ಪಡೆದರೆ ಮಾತ್ರ ಅವಕಾಶ ಸಿಗಲಿದೆ.
ನಿಯಮ ಉಲ್ಲಂಘಿಸಿದರೆ ದಂಡ
ಹೊಸ ನಿಯಮ ಪಾಲಿಸದಿದ್ದರೆ 500 ರೂ. ದಂಡ ವಿಧಿಸುವುದಾಗಿ ಉದ್ಯಾನವನ ಇಲಾಖೆ ತಿಳಿಸಿದೆ. ಪುನಃ ಪುನಃ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಸಂರಕ್ಷಣೆ , ಭದ್ರತೆ,
ಸಸ್ಯಸಂಪತ್ತನ್ನು ಕಾಪಾಡುವುದು ಮತ್ತು ಉದ್ಯಾನವನದ ಭದ್ರತೆಯನ್ನು ಹೆಚ್ಚಿಸುವುದು ಸರ್ಕಾರದ ಉದ್ದೇಶ ಮುಖ್ಯ ಸದುದ್ದೇಶ. 7 ಕೋಟಿ ದರೋಡೆ ಪ್ರಕರಣದ ನಂತರ, ಉದ್ಯಾನ ಪರಿಸರದ ಮೇಲಿನ ನಿಗಾವಹಣ ಹೆಚ್ಚಿಸಲು ಸರ್ಕಾರ ಈ ಕ್ರಮ ಜಾರಿಗೆ ತಂದಿದೆ.
