ಬೆಂಗಳೂರು : ರಾಜ್ಯದಲ್ಲಿ ಕಳೆದ 11 ತಿಂಗಳ ಅವಧಿಯಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾದವರ ಸಂಖ್ಯೆ 558 ಜನ. ಬೆಂಗಳೂರು, ಮೈಸೂರು, ತುಮಕೂರು , ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿ ಪಂಚನಗರಗಳಲ್ಲಿ ಸುಮಾರು 79 ಸಾವಿರಕ್ಕೂ ಅಧಿಕ ಗುಂಡಿಗಳು ಸಾರ್ವಜನಿಕರನ್ನು ಕಾಡುತ್ತಿವೆ. ರಸ್ತೆಗಳಲ್ಲಿ ಗುಂಡಿ ಬಿದ್ದ ಪರಿಣಾಮ ಇಲ್ಲಿಯವರಗೂ 3000ಕ್ಕೂ ಅಧಿಕ ಮಂದಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಳೆಗಾಲದ ಸಂದರ್ಭದಲ್ಲಿ ಅತಿವೃಷ್ಟಿಯಿಂದಾಗಿ ನಗರದ ಹಲವು ಭಾಗಗಳ ರಸ್ತೆಗಳು ಹಾಳಾದ ಪರಿಣಾಮ ರಸ್ತೆಗಳಲ್ಲಿ ಹೊಂಡ ಬೀಳುವುದು ಸಾಮಾನ್ಯವಾಗಿದೆ. ಇದಕ್ಕೆ ಮಳೆಯೇ ಕಾರಣ ಎಂದು ದೂರುವಂತಿಲ್ಲ. ರಸ್ತೆ ನಿರ್ಮಾಣದಲ್ಲಿ ಅಧಿಕಾರಿಗಳು ಮತ್ತು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕಳಪೆ ಗುಣಮಟ್ಟ ಮತ್ತು ಅವೈಜ್ಱನಿಕ ಕಾಮಗಾರಿ ಎನ್ನಬಹುದು.
ಇನ್ನು ಇಂತಹ ಪರಿಸ್ಥಿತಿ ನಿಯಂತ್ರಣ ಮಾಡುವಲ್ಲಿ ಪೊಲೀಸ್ ಆಯುಕ್ತರು ವಿಫಲರಾಗಿದ್ದಾರೆ. ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಳ ಮತ್ತು ಟ್ರಾಫಿಕ್ನಿಂದಾಗಿ ನಿಧಾನವಾಘಿ ಚಲಿಸುವ ವಾಹನಗಳಿಂದ ಗುಂಡಿ ಬಿದ್ದ ಕಡೆ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿವಿ ಇದರಿಂದ ಸುಮಾರು 750ಕ್ಕೂ ಹೆಚ್ಚಿನ ಅಪಘಾತಗಳು ಸಂಭವಿಸಿವೆ ಮತ್ತು 20ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳೀಯ ಸಮಸ್ಯೆಯನ್ನು ಕುಡಲೇ ಸರಿಪಡಿಸಬೇಕೆಂದು ಸರ್ಕಾರದ ವಿವಿಧ ಇಲಾಖೆಗಳಿಗೆ ಪತ್ರ ಬರೆದಿದ್ದೇವೆ, ಆದರೂ ಈ ದುಸ್ಥಿತಿ ಇನ್ನೂ ಹೀಗೆ ಇದೆ ಎಂಧು ಪೊಲೀಸ್ ಆಯುಕ್ತರು ವ್ಯಕ್ತಪಡಿಸಿದ್ದಾರೆ.
