ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರ ಸಂಸತ್ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪಕ್ಷಗಳ ಸಂಸದರೊಂದಿಗೆ ಡಿ.8ರಂದು ಸರ್ವಪಕ್ಷ ಸಭೆಯನ್ನು ನಡೆಸುವ ಉದ್ದೇಶ. ಆದರೆ ತಾಂತ್ರಿಕ ಕಾರಣಗಳು ಮತ್ತು ವಿರೋಧ ಪಕ್ಷಗಳು ಇದಕ್ಕೆ ನಿರಾಸಕ್ತಿ ತೋರಿದ್ದು, ಸಭೆಯನ್ನು ಮುಂದೂಡಲಾಗಿದೆ. ಸಭೆಯಲ್ಲಿ ಮೆಕ್ಕೆಜೋಳ, ಕಬ್ಬು ಬೆಲೆ ಕುಸಿತ, ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ಮತ್ತು ಗ್ರಾಮೀಣ ನಗರಾಭಿವೃದ್ಧಿ ಕುರಿತ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಇತ್ತೀಚಿನ ಉಭಯ ನಾಯಕರು ಕೆಲ ವಿಷಯಗಳ ಕುರಿತು ಚರ್ಚಿಸಿ, ವಿರೋಧ ಪಕ್ಷಗಳ ನಾಯಕರನ್ನು ಸೇರಿಸಿಕೊಂಡು ದೆಹಲಿಗೆ ಹೋಗುವ ಯೋಜನೆ ರೂಪಿಸಿದ್ದರು. ಆದರೆ ವಿಪಕ್ಷಗಳು ಭಾಗವಹಿಸಲು ಒಪ್ಪದಿದ್ದ ಕಾರಣ ಸಭೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಕಾರಣಾಂತರದಿಂದ ಮತ್ತೊಂದು ದಿನಾಂಕವನ್ನು ನಿಗದಿಪಡಿಸುವಂತೆ ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
