
ಗದಗ : ಡಿ.2ರ ಮಧ್ಯರಾತ್ರಿ ಗದಗ ನಗರದಲ್ಲಿ ಬಂಗಾರದ ಅಂಗಡಿಯಲ್ಲಿ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ಶಹರ ಸ್ಟೇಶನ್ ರಸ್ತೆಯ ತೋಂಟದರ್ಯ ಮಠದ ಕ್ರಾಸ್ ಹತ್ತಿರದ ಶ್ರೀ ಶಾಂತದುರ್ಗಾ ಜ್ಯೂವೆಲ್ಲರಿ ಅಂಗಡಿಯಲ್ಲಿ ತನ್ನ ಕೈ ಚಳಕವನ್ನು ತೋರಿಸಿದ್ದಾನೆ. ಅಂಗಡಿಗೆ ನುಗ್ಗಿ ಮೂರು ಅಂತಸ್ತಿನ ಕಟ್ಟಡದ ಕಿಟಕಿಯ ಸರಳುಗಳನ್ನು ಕಟ್ ಮಾಡಿ ಅಂಗಡಿಯ ಒಳಕ್ಕೆ ನುಗ್ಗಿ ಕೌಂಟರ್ನಲ್ಲಿಟ್ಟಿದ್ದ 80 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿದ್ದು, ಅಂಗಡಿ ಮಾಲಿಕ ನಾರಾಯಣ ಸಂತೋಷ್ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮಾಡಿದ್ದು, ಜಿಲ್ಲಾ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮತ್ತು ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಯನ್ನು ಆರಂಭಿಸಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಮಹಾರಾಷ್ಟ್ರ ಮೂಲದ ಮೊಹಮ್ಮದ್ ಹುಸೇನ್ ಸಿದ್ದಿಕಿ ಎಂಬಾತನನ್ನು ಬಂಧಿಸಲಾಗಿದೆ.
