
ಬೆಂಗಳೂರು: ಬೆಂಗಳೂರಿನಲ್ಲಿ ಐಟಿ ಕೆಲಸ ಮಾಡುತ್ತಿದ್ದವನನ್ನು 40ಲಕ್ಷ ರೂಗಳನ್ನು ವಂಚಿಸಿದ ಆರೋಪದಡಿ ವಿಜಯ್ ಮತ್ತು ಆತನ ಸಹಚರರನ್ನು ಬಂಧನ ಮಾಡಿದ್ದಾಋಎ.
ಬೆಂಗಳೂರು, ತುಮಕೂರು ಸೇರಿ ಎಂಟು ಸ್ಥಳಗಳಲ್ಲಿ ಟೆಂಟ್ ಹೊಂದಿದ್ದ ಆರೋಪಿಗಳು ಎಲ್ಲಾ ರೀತಿಯ ವೈದ್ಯಕೀಯ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಎಂದು ಹೇಳಿ ವಂಚನೆ ಮಾಡುತ್ತಿದ್ದವರು. ಅದನ್ನು ನಂಬಿದ ಟೆಕ್ಕಿ ಕಳೆದುಕೊಂಡದ್ದು 40ಲಕ್ಷ ಹಣ.
ತನ್ನ ಲೈಂಗಿಕ ಸಮಸ್ಯೆ ಇದೆ ಎಂದು ಹೇಳಿ ಉತ್ತಮ ನೈಸರ್ಗಿಕ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ಹೇಳಿ ಪ್ರತಿ ಬಾರಿ ಇಷ್ಟು ದಿನಗಳ ಕಾಲ ಚಿಕಿತ್ಸೆ ನೀಡುವುದಾಗಿ ಸ್ವಲ್ಪ-ಸ್ವಲ್ಪ ಹಣವನ್ನು ಪಡೆದುಕೊಂಡು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆಯಲ್ಲಿ ಎಡವಟ್ಟಉ ಆಗಿ ದುಷ್ಪರಿಣಾಮ ಬೀರಿದ್ದು, ಟೆಕ್ಕಿ ತಕ್ಷಣ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸ್ ನಕಲಿ ಗುರೂಜಿಯ ಆಟ ಬಯಲಾಗಿದ್ದು, ತೆಲಂಗಾಣ ಮೊಹಬೂಬ್ ನಗರದಲ್ಲಿ ವಿಜಯ್ ಗುರೂಜಿ ಎಂಬುವನು ಮತ್ತು ಸಹಚರರು ಸೇರಿ ಮೂವರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಅಟ್ಟಿದ್ದಾರೆ. ಟೆಕ್ಕಿಯ ದೂರಿನ ಮೇರೆಗೆ ತನಿಖೆ ಮಾಡಿದಾಗ ಅಪರಾಧಿಗಳಿಂದ 19.50 ಲಕ್ಷ ಹಣ ಸೇರಿ ಒಂದು ಟಿ.ಟಿ ವಾಹನವನ್ನು ವಶಕ್ಕೆ ಪಡೆದುಕೊಂಡು ಅಪರಾಧಿಗಳನ್ನು ಬಂಧನ ಮಾಡಿದ್ದಾರೆ.
