FOOTPATH ವಿಜಯಪುರದಲ್ಲಿ ಫುಟ್ಪಾತ್ ತೆರವು-ವ್ಯಾಪಾರಸ್ಥರ ಆಕ್ರೋಶ
ದೇವನಹಳ್ಳಿ, ಜು.13: ಬೆಂಗಳೂರು ನಗರ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಫುಟ್ ಪಾತ್ ತೆರವು ಕಾರ್ಯಾಚರಣೆ ಆರಂಭವಾಗಿದೆ. ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿ ಇಂದು ಫುಟ್ಪಾತ್ ಮೇಲೆ ಕಟ್ಟಿಕೊಂಡಿದ್ದ ಪೆಟ್ಟಿಗೆ, ಶೀಟ್ಗಳನ್ನು ಇಂದು ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ವಿಜಯಪುರ ಪಟ್ಟಣದ ಹಲವೆಡೆ ಫುಟ್ಪಾತ್ ತೆರವುಗೊಳಿಸಿದ್ದರಿಂದ ಪುರಸಭೆ ಅಧಿಕಾರಿಗಳ ವಿರುದ್ಧ ವ್ಯಾಪಾರಸ್ಥರು, ಸ್ಥಳೀಯರು ಆಕ್ರೋಶ ವ್ಯಕ್ತಪರಿಸಿದರು. ಒಂದೇ ಒಂದು ನೊಟೀಸ್ ಕೊಡದೆ ಏಕಾಏಕಿ ಬಂದು ತೆರವು ಕಾರ್ಯಾಚರಣೆ ಮಾಡ್ತಿದ್ದಾರೆ. ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣದಂತೆ ನೋಡುತ್ತಿದ್ದಾರೆ. ವಿಜಯಪುರ ಪಟ್ಟಣದ ಹಲವು ಕಡೆ ಶ್ರೀಮಂತ ವ್ಯಕ್ತಿಗಳು ಫುಟ್ಪಾತ್ ಒತ್ತುವರಿ ಮಾಡಿಕೊಂಡಿದ್ದರೂ ಅಲ್ಲಿ ರಸ್ತೆ ತೆರವುಗೊಳಿಸದೇ ಬಡವರ ಅನ್ನ ಕಸಿದುಕೊಳ್ಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಪುರಸಭೆಗೆ ಟ್ಯಾಕ್ಸ್, ಕರೆಂಟ್ ಬಿಲ್ ಕಟ್ಟಿಕೊಂಡು ವ್ಯಾಪಾರ ಮಾಡ್ತಿದ್ದೀವಿ. ಮನೆ ಇಲ್ಲದೆ ಅಂಗಡಿಯಲ್ಲೇ ಜೀವನ ಮಾಡ್ತಿದ್ದೀವಿ. ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳನ್ನ ಆಚೆ ಹಾಕಿದ್ದಾರೆ.
ನಾವು ಏನು ಮಾಡಬೇಕೆಂದು ಅಧಿಕಾರಿಗಳ ಮುಂದು ಅಳಲು ತೋಡಿಕೊಂಡಿದ್ದಾರೆ.
