ಮುಖ್ಯಾಂಶಗಳು :-
- ಕ್ಷಣಕ್ಷಣಕ್ಕೂ ಕಾವೇರುತ್ತಿರುವ ಬಿಡದಿ ಟೌನ್ಶಿಪ್ ಕಿಚ್ಚು
- ಸರ್ವೆಗೆ ಬಂದಿದ್ದ ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ
- ಬಿಡದಿ ಬಳಿಯ ಮಂಡಲಹಳ್ಳಿಯಲ್ಲಿ ಬಿಗುವಿನ ವಾತಾವರಣ
- ಬಿಡದಿ ಬಳಿಯ ರೈತರ ಜಮೀನು ಸರ್ವೆಕಾರ್ಯ
- ಜಮೀನಿಗೆ ಅಧಿಕಾರಿಗಳು ಕಾಲಿಡುತ್ತಿದ್ದಂತೆ ಹಲ್ಲೆ
- ರೈತರ ನೂಕುನುಗ್ಗಲು, ಪೊಲೀಸರ ನಡುವೆ ವಾಗ್ವಾದ
ರಾಮನಗರ, ಜುಲೈ 13: ಬಿಡದಿ ಟೌನ್ಶಿಪ್ Bidadi Township ವಿಚಾರವಾಗಿ ಇನ್ನೂ ಗಲಾಟೆ ಗದ್ದಲ ನಡೆಯುತ್ತಲೇ ಇದೆ. ಸರ್ಕಾರದ ನಿರ್ಧಾರಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜಮೀನು ಒತ್ತುವರಿ ವಿರುದ್ಧ ತಿರುಗಿಬಿದ್ದಿದ್ದಾರೆ. ಇದೀಗ ಇದರದ್ದೇ ಭಾಗವಾಗಿ ಇಂದು ಮಂಡಲಹಳ್ಳಿ ಗ್ರಾಮದಲ್ಲಿ ರೈತರಿಂದ ತೀವ್ರ ಹೋರಾಟ ನಡೆದಿದೆ. [JMC]ಜೆಎಂಸಿ ಸರ್ವೇಗೆ ಬಂದ ಅಧಿಕಾರಿಗಳ ಕಾರಿಗೆ ರೈತರು ಮುತ್ತಿಗೆ ಹಾಕಿ, ಕಾರನ್ನು ಜಖಂಗೊಳಿಸಿದ್ದಾರೆ. ರೈತರು ಪೊರಕೆಯಿಂದ ಕಾರಿಗೆ ಹೊಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಘಟನೆ ಬಿಡದಿ ತಾಲ್ಲೂಕಿನ ಮಂಡಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೆಎಂಸಿ ಸರ್ವೇ ಮಾಡಲು ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದರು. ಆದರೆ ರೈತರು ಯಾವುದೇ ಕಾರಣಕ್ಕೂ ಸರ್ವೇ ಮಾಡಲು ಅನುಮತಿ ನೀಡಲಿಲ್ಲ. ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ರೈತರು ಕೇಳಲಿಲ್ಲ. ರೈತರು ಸರ್ವೆಗೆ ಬಂದ ಅಧಿಕಾರಿಗಳ ಕಾರನ್ನು ಸುತ್ತುವರಿದು, ಪೊರಕೆಯಿಂದ ಹೊಡೆದಿದ್ದಾರೆ. ರೈತ ಮಹಿಳೆಯರೂ ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸ್ಥಳದಲ್ಲಿ ಪೊಲೀಸರು ಇದ್ದರೂ ರೈತರ ಆಕ್ರೋಶವನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ. ಪೊಲೀಸರನ್ನು ಲೆಕ್ಕಿಸದೇ ರೈತರು ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ಪೊರಕೆಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಯಾವಗ ಸಿಎಂ ಡಿ.ಕೆ ಶಿವಕುಮಾರ್ರವರು ಬಿಡದಿಯನ್ನ ಟೌನ್ಶಿಪ್ ಮಾಡ್ತಿನಿ ಆಗುತ್ತೆ ಅಂಥ ಹೇಳುದ್ರೋ ಆಗಿನಿಂದ್ಲೂ ಬಿಡಿದಿ ಜನರು ಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ.. ಹಾಗೇ ಅಲ್ಲಿನ ಜನ ಮಾತ್ರ ಈ ಟೌನ್ಶಿಪ್ನ ತಡೆಯೊಕ್ಕೆ ನಮ್ಮಿಂದ ಸಾಧ್ಯವಿಲ್ಲ ಅಂಥ ಕೈ ಚೆಲ್ಲಿ ಕೂತ್ಕೊಂಡಿಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ..!
ಇನ್ನೂ ಸರ್ಕಾರದ ವಿರುದ್ಧ ಬಿಡಿದ ರೈತರ ಆಕ್ರೋಶ ಏಕೆ…?
ಬಿಡದಿ ಟೌನ್ಶಿಪ್ ವಿರೋಧಿಸಿ ಮತ್ತು ಈ ಸರ್ವೇಯಿಂದ ತಮಗೆ ನಷ್ಟವಾಗುತ್ತದೆ ಎಂದು ರೈತರು ಭಾವಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ಸರ್ವೇಯು ಅವರ ಭೂಮಿ, ಬೆಳೆ ಮತ್ತು ಜೀವನಾಧಾರಕ್ಕೆ ಸಂಬಂಧಿಸಿದ್ದು, ಅದನ್ನು ತಡೆಯುವುದು ತಮ್ಮ ಹಕ್ಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ನೂ ರೈತರು ತಮ್ಮ ಭೂಮಿ ಮತ್ತು ಬೆಳೆಗಳನ್ನು ರಕ್ಷಿಸುವ ಸಲುವಾಗಿ ಈ ಹೋರಾಟ ನಡೆಸುತ್ತಿದ್ದಾರೆ. ಸರ್ವೇ ಅಧಿಕಾರಿಗಳು ರೈತರ ಆತಂಕವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಮುಂದುವರೆಯಲು ಪ್ರಯತ್ನಿಸಿದ್ದರಿಂದ ರೈತರ ಆಕ್ರೋಶ ತೀವ್ರತೆಯನ್ನ ಪಡೆದುಕೊಂಡಿದೆ.. ಮಹಿಳೆಯರು ಪೊರಕೆಯಿಂದ ಕಾರಿಗೆ ಹೊಡೆದು ತಮ್ಮ ವಿರೋಧವನ್ನು ತೋರಿಸಿದ್ದಾರೆ.
BIDADI TOWNSHIP https://en.wikipedia.org/wiki/Bidadi
ಅದ್ರಲ್ಲೂ ಈ ಟೌನ್ಶಿಪ್ ಹಾಗೇ ಅಧಿಕಾರಿಗಳಿಗೆ ಪೊರಕೆಯಿಂದ ಹೊಡದ ಘಟನೆಯು ರೈತರ ಸಮಸ್ಯೆಗಳನ್ನ ತೋರಿಸ್ತಿದ್ದೆ.. ಯಾಕಂದ್ರೆ ಬೆಳೆ ಬೆಳೆಯುವ ರೈತರ ಭೂಮಿಯ ಬಗ್ಗೆ ಯಾವುದೇ ನಿರ್ಧಾರಗಳನ್ನ ತೆಗೆದುಕೊಳ್ಳೋ ಮುನ್ನ ನಮ್ಮ ಅಭಿಪ್ರಾಯ ಕೇಳ್ಬೇಕು ಅಂಥ ರೈತರು ಆಗ್ರಹಿಸ್ತಿದ್ದಾರೆ… ಇನ್ನೂ ಯಾವುದೇ ಪರ್ಮಿಷನ್ ಪಡೆಯದೇ ಅಧಿಕಾರಿಗಳು ಸರ್ವೇಗೆ ಬರೋದು ಎಷ್ಟರ ಮಟ್ಟಿಗೆ ಸರಿ ಎಂದು ಆರೋಪ ಮಾಡ್ತಿದ್ದಾರೆ.
ಇನ್ನೂ ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ರೆ ಈ ರೀತಿಯ ಘಟನೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಪೊಲೀಸರು ರೈತರ ಮತ್ತು ಅಧಿಕಾರಿಗಳ ನಡುವೆ ಸಂಭಾಷಣೆ ನಡೆಸಿ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಿದ್ದಾರೆ. ಈ ಘಟನೆ ರೈತರ ಆಕ್ರೋಶವನ್ನು ತೋರಿಸುತ್ತಿದೆ. ಸರ್ಕಾರ ಮತ್ತು ರೈತರ ನಡುವೆ ಸಂವಾದ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವಿದೆ.
