ಬೆಂಗಳೂರು :- ಸರ್ಕಾರ ಯೋಜನೆ ಕೈಬಿಡದಿದ್ರೆ, ಬಿಡದಿ ಟೌನ್ ಶಿಪ್ ವಿರುದ್ಧ ಹೋರಾಟ ನಡೆಸ್ತಿರುವ ರೈತರನ್ನ ಬೆಂಬಲಿಸಿ ನಾನು ಗಾಂಧಿ ಪ್ರತಿಮೆ ಬಳಿ ಹೋರಾಟ ಮಾಡುವುದಾಗಿ ದೇವೇಗೌಡ್ರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ ಸ್ಥಳೀಯ ರೈತರು ನಡೆಸ್ತಿರೋ ಹೋರಾಟ ತೀವ್ರಗೊಂಡಿದೆ. ರೈತರ ಹೋರಾಟಕ್ಕೆ ಬಿಜೆಪಿ-ಹಾಗೂ ಜೆಡಿಎಸ್ ಕೂಡ ಸಾಥ್ ನೀಡಿದೆ. ಇದೀಗ ಜೆಡಿಎಸ್ ವರಿಷ್ಠ ಹಾಗೂ ರಾಜ್ಯದ ಹಿರಿಯ ರಾಜಕಾರಣಿ ಹೆಚ್.ಡಿ ದೇವೇಗೌಡ ಅವ್ರು ಕೂಡ ರೈತರ ಪರ ಹೋರಾಟಕ್ಕೆ ಧುಮುಕಿದ್ದಾರೆ.
ಸಿಎಂ ಡಿ.ಕೆ ಶಿವಕುಮಾರ್ಗೆ ಹೆಚ್.ಡಿ ದೇವೇಗೌಡರು ಪತ್ರ
GOK 18 Shri. D K Shivakumar Reg Bidadi Town ship (1)
ಬಿಡದಿ ಟೌನ್ ಶಿಪ್ ಯೋಜನೆಯನ್ನ ತಕ್ಷಣವೇ ಕೈ ಬಿಡುವಂತೆ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಪತ್ರ ಬರೆದಿದ್ದಾರೆ. ಸರ್ಕಾರ ಯೋಜನೆ ಕೈಬಿಡದಿದ್ರೆ, ಬಿಡದಿ ಟೌನ್ ಶಿಪ್ ವಿರುದ್ಧ ಹೋರಾಟ ನಡೆಸ್ತಿರುವ ರೈತರನ್ನ ಬೆಂಬಲಿಸಿ ನಾನು ಗಾಂಧಿ ಪ್ರತಿಮೆ ಬಳಿ ಹೋರಾಟ ಮಾಡುವುದಾಗಿ ದೇವೇಗೌಡ್ರು ಎಚ್ಚರಿಕೆ ನೀಡಿದ್ದಾರೆ. ಇನ್ನೂ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ್ರು, ಕುಮಾರಸ್ವಾಮಿ ಪಶ್ಚಿಮ ಬಂಗಾಳದಲ್ಲಿದ್ದು, ನಿನ್ನೆಯ ಘಟನೆಗೆ ಕಂಡು ಬೇಸರಗೊಂಡಿದ್ದಾರೆ. ರೈತರು ಹೋರಾಟ ಮುಂದುವರಿಸಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದಿದ್ದಾರೆ. ನಾನು ಎಲ್ಲಾ ಘಟನೆ ಗಮನಿಸಿದ್ದು, ರೈತರಿಗೆ ಅನ್ಯಾಯವಾಗಲು ನಾನು ಬಿಡಲ್ಲ, ಹೋರಾಟಕ್ಕೆ ನಾನು ಸಿದ್ದ.. ಆಸ್ಪತ್ರೆಗೆ ದಾಖಲಾಗುವಂತೆ ಹಲ್ಲೆ ನಡೆದಿಲ್ಲ, ಸುಮಾರು 40 ಪರ್ಸೆಂಟ್ ಜನರು ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ. ಅವ್ರು ಮಾತ್ರ ನಮ್ಮ ಜಮೀನು ತಗೊಳ್ಳಿ ಅಂತಿದ್ದಾರೆ. ಉಳಿದವರು ಅಲ್ಲೇ ಕೃಷಿ, ಹೈನುಗಾರಿಕೆ ಮೂಲಕ ಜೀವನ ನಡೆಸ್ತಿದ್ದಾರೆ. ನಾನು ಪ್ರತಿ ಬೆಳವಣಿಗೆ ಗಳನ್ನು ಗಮನಿಸಿದ್ದೇನೆ, ಆಸ್ಪತ್ರೆಗೆ ಮಲಗುವ ರೀತಿಯಲ್ಲಿ ಯಾರಿಗೇನು ಹಲ್ಲೆ ಆಗಿಲ್ಲ. ಬಡ ರೈತ ಮಹಿಳೆಯ ಕಷ್ಟ-ನೋವು ಇವರಿಗೇನು ಗೊತ್ತು ಎಂದು ದೇವೇಗೌಡ್ರು ಕಿಡಿಕಾರಿದ್ರು.
ಇದೀಗ ಸರ್ವೆ ಕಾರ್ಯವನ್ನ ಸರ್ಕಾರ ನಿಲ್ಲಿಸಿದ್ದು, ಈ ನಿರ್ಧಾರ ಸ್ವಾಗತ ಮಾಡುತ್ತೇನೆ. ಸರ್ಕಾರದ ನಡವಳಿಕೆ ನೋಡಿಕೊಂಡು ಮುಂದೆ ನನ್ನ ಕಾರ್ಯ ರೂಪಿಸ್ತೇನೆ. ಸರ್ಕಾರಕ್ಕೆ ಬಿಡದಿ ಟೌನ್ಶಿಪ್ ಯೋಜನೆ ಕೈ ಬಿಡಲು 4-5 ದಿನ ಗಡುವು ನೀಡಿದ ದೇವೇಗೌಡ್ರು, ಮುಂದೆ ಏನ್ ಮಾಡಬೇಕೆಂದು ನಿರ್ಧಾರ ಮಾಡ್ತಿನಿ ಎಂದಿದ್ದಾರೆ.


