Student protest: ಕಾನೂನು ಬಾರಹಿತ ಕೃಷಿ ಇಲಾಖೆ ಅಧಿಕಾರಿ ನೇಮಕಕ್ಕೆ ಕೃಷಿ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ-ಧಾರವಾಡ ಕೃಷಿ ವಿವಿ ಕುಲಪತಿ ಕಚೇರಿ ಎದುರು ಧರಣಿ.
ಧಾರವಾಡ, ಜು.14:ಕೃಷಿ ಇಲಾಖೆಯಲ್ಲಿನ ಕೃಷಿ ಅಧಿಕಾರಿ ಹುದ್ದೆಗೆ ನಿಯಮ ಬಾಹಿರ ನೇಮಕಾತಿ ವಿರೋಧಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕೆಇಎಯಿಂದ ಕೃಷಿ ಅಧಿಕಾರಿ ಹುದ್ದೆಗೆ ಖಾಲಿಯಿರುವ ಒಟ್ಟು 945 ಕೃಷಿ ಅಧಿಕಾರಿ ಹುದ್ದೆ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಕೃಷಿ ವಿದ್ಯಾರ್ಥಿಗಳನ್ನ ಬಿಟ್ಟು ಇಂಜಿನಿಯರಿಂಗ್ ಸ್ಟೂಡೆಂಟ್ ಗೆ ಅವಕಾಶ ಕೊಟ್ಟಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಯೋ ಟೆಕ್ನಾಲಜಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಅವಕಾಶ ನೀಡಿದ್ದಕ್ಕೆ ವಿರೋಧ ವ್ಯಕ್ತಿಪಡಿಸಿದರು.

ಕೆಲವು ಕಾಲೇಜುಗಳು ಕೃಷಿ ವಿವಿ ಮಾನ್ಯತೆ ಪಡೆಯದಿದ್ದರೂ ಅವರಿಗೆ ಉದ್ಯೋಗದಲ್ಲಿ ಅವಕಾಶ ನೀಡಲಾಗಿದೆ. ಕೃಷಿ ವಿವಿ ವಿದ್ಯಾರ್ಥಿಗಳು ಬೇಸಾಯಶಾಸ್ತ್ರ, ಕೀಟಶಾಸ್ತ್ರ, ಪ್ಯಾಥೋಲಾಜಿ ಮತ್ತು ಕೃಷಿಗೆ ಸಂಬಂಧಿಸಿದ ವಿಷಯ ಕಲಿಯುತ್ತಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದರಲ್ಲಿ ಉದ್ಯೋಗ ಅವಕಾಶ ಕೊಟ್ಟಾಗ ರೈತರಿಗೆ ಸಮಸ್ಯೆ ಆಗಲಿದೆ ಎಂದು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೃಷಿ ವಿವಿ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬಾರದು. ಕೂಡಲೇ ಸರ್ಕಾರ ಅಧಿಸೂಚನೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕೃಷಿ ವಿವಿ ಎದುರು ಜಮಾಯಿಸಿ ವಿದ್ಯಾರ್ಥಿಗಳು ಪ್ರತಿಟಿಸಿದರು. ಇದೆ ಜುಲೈ 25 ರಂದು ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಯನ್ನ ನಡೆಸಬಾರದು ಎಂದು ವಿದ್ಯಾರ್ಥಿಗಳ ಒತ್ತಾಯಿಸಿ ಮನವಿ ಪತ್ರ ನೀಡಿದರು.
ಕೃಷಿ ಅಧಿಕಾರಿ ಹುದ್ದೆಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನ ತೆಗೆದುಕೊಳ್ಳಬಾರದು. ಅಧಿಸೂಚನೆ ಕೈಬಿಡುವವರೆಗೆ ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆ ನೀಡಿದರು. ಪರೀಕ್ಷೆಗೆ ನಿಗದಿ ಮಾಡಿದ ದಿನಾಂಕ ತಡೆ ಹಿಡಿಯಬೇಕು ಎಂದು ಒತ್ತಾಯ ಮಾಡಿದರು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಕೃಷಿ ವಿವಿ ಕುಲಪತಿ ಸ್ಪಷ್ಟನೆ
ಇನ್ನು ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಕೃಷಿ ವಿವಿ ಕುಲಪತಿ ಎನ್ ಬಿ ಪ್ರಕಾಶ್ ಹೇಳಿದರು. ಬೇರೆ ಕೃಷಿ ವಿವಿಗಳಲ್ಲಿ ಸದ್ಯ ಯಾರೂ ಪ್ರತಿಭಟನೆ ಮಾಡುತ್ತಿಲ್ಲ, ನಮ್ಮ ವಿದ್ಯಾರ್ಥಿಗಳು ಇದನ್ನ ಗಮನಕ್ಕೆ ತಂದಿದ್ದರಿಂದ ನಮಗೆ ಈ ಬಗ್ಗೆ ಗೊತ್ತಾಗಿದೆ. ಈ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ. ನಾನು ಕೃಷಿ ಇಲಾಖೆಯ ಪ್ರಿನ್ಸಿಪಲ್ ಸೆಕ್ರಟರಿ ಜೊತೆ ಮಾತನಾಡುತ್ತೇನೆ. ಅಲ್ಲದೇ 2 ದಿನಗಳಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಕುಲಪತಿಗಳು ಭರವಸೆ ನೀಡಿದರು.
