Dr. T. A. Sharavana ದೇವೇಗೌಡರ ಜೊತೆ ಅವರ ಮನೆಗೆ ನಾವು ತೆರಳಿದಾಗ ನಮಗೆ ಚೆನ್ನಮ್ಮನವರು ನೀಡುತ್ತಿದ್ದ ಆತಿಥ್ಯ ಸದಾ ನಮ್ಮ ತಾಯಿ ನೆನಪು ಮಾಡುತ್ತಿತ್ತು. ಅವರ ನಿಧನದಿಂದ ಆಘಾತವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಜು.18: ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡ ಅವರ ಧರ್ಮಪತ್ನಿ ಹಾಗೂ ಅತ್ಯಂತ ಸರಳ-ಸಜ್ಜನಿಕೆಯ ಮನೋಭಾವದವರಾಗಿದ್ದ ಶ್ರೀಮತಿ ಚೆನ್ನಮ್ಮ ಅವರು ದೈವಾಧೀನರಾದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಅಘಾತವಾಗಿದೆ.

ಶ್ರೀ ಹೆಚ್.ಡಿ ದೇವೇಗೌಡ ಅವರ ಯಶಸ್ವಿ ರಾಜಕಾರಣದಲ್ಲಿ ಶ್ರೀಯುತರ ಪಾತ್ರವೂ ಅಪೂರ್ವವಾಗಿತ್ತು. ನಮ್ಮ ಮಾರ್ಗದರ್ಶಕರಾದ ದೇವೇಗೌಡರೊಂದಿಗೆ ಮನೆಗೆ ತೆರಳಿದಾಗಲೆಲ್ಲ ಅವರು ನೀಡಿದ್ದ ಆತಿಥ್ಯ ಸದಾ ನಮ್ಮ ತಾಯಿಯವರನ್ನು ನೆನಪಿಸಿದಂತಾಗುತ್ತಿತ್ತು. ಅವರ ನೆನಪು ನಮ್ಮೆಲ್ಲರಲ್ಲಿ ಸದಾ ಚಿರಸ್ಮರಣೀಯವಾಗಿರಲಿದೆ.
ಶ್ರೀ ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ ಹಾಗೂ ಅಪಾರ ಬಂಧುಗಳು, ಅಭಿಮಾನಿಗಳಿಗೆ ಆ ಭಗವಂತ ಈ ತೀವ್ರ ದುಃಖದ ಸಂದರ್ಭದಲ್ಲಿ ಹೆಚ್ಚಿನ ಶಕ್ತಿಯನ್ನು ನೀಡಲಿ. ಶ್ರೀಯುತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶರವಣ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
