Chitradurga-Heart Attack: Heart attack during a play performance; Artist collapses on stage, tragic end –ನಾಟಕ ಪ್ರದರ್ಶನ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಕಲಾವಿದ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಅ.15: ರಂದು ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿದೆ. ನಿಂತಲ್ಲೇ ಕುಸಿದು ಬೀಳೋದು, ಜಿಮ್ನಲ್ಲೇ ಜೀವ ಹೋಗುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಚಿತ್ರದುರ್ಗದಲ್ಲಿ ನಾಟಕ ಪ್ರದರ್ಶನದ ವೇಳೆ ವೇದಿಕೆ ಮೇಲೆಯೇ ಕಲಾವಿದನಿಗೆ ಹೃದಯಘಾತವಾಗಿದ್ದು, ಕಲಾವಿದನ ಬದುಕ ದುರಂತ ಅಂತ್ಯ ಕಂಡಿದೆ.
ನಾಟಕ ಪ್ರದರ್ಶನದ ವೇಳೆ ಕುಸಿದು ಬಿದ್ದ ಕಲಾವಿದ.
ನಾಟಕ ಪ್ರದರ್ಶನ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಕಲಾವಿದ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಶಿವಣ್ಣ (45) ಮೃತ ದುರ್ದೈವಿ ಆಗಿದ್ದಾರೆ. ತಡರಾತ್ರಿ ಸಾಮಾಜಿಕ ನಾಟಕ ಪ್ರದರ್ಶನದ ವೇಳೆ ಶಿವಣ್ಣ ಕುಸಿದು ಬಿದ್ದಿದ್ದಾರೆ.
ಕಲಾವಿದೆ ಜೊತೆ ಡ್ಯಾನ್ಸ್..? – ನಾಟಕ ನಡುವೆ ಬಂದ ಹಾಡಿಗೆ ಕಲಾವಿದೆ ಜೊತೆ ಕಲಾವಿದ ಶಿವಣ್ಣ ಅವ್ರು ನಾಟಕ ಪ್ರದರ್ಶನ ಮಾಡುತ್ತಿದ್ದ ವೇಳೆ ಶಿವಣ್ಣ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಶಿವಣ್ಣ ಸಾವನ್ನಪ್ಪಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.
ಹೃದಯ ಜಾರಿತು ನಾಟಕ ..?- ಹೃದಯ ಜಾರಿತು ಪ್ರೀತಿ ಉಳಿಯಿತು ನಾಟಕ ಪ್ರದರ್ಶನದ ವೇಳೆ ಕಲಾವಿದ ಶಿವಣ್ಣ ಅವ್ರು CID ಎಂಬ ಪಾತ್ರ ಮಾಡುತ್ತಿದ್ರು. ನಟನೆ ಮಾಡ್ತಿದ್ದ ವೇಳೆಯೇ ವೇದಿಕೆ ಮೇಲೆ ಕುಸಿದು ಬಿದ್ದಿದ್ದಾರೆ.
