Kodi Mutt Shri: Kodi Mutt Swamiji’s explosive prediction on the occasion of Dussehra! What did he say about political change? – ದಸರಾ ಹಬ್ಬದ ಹಿನ್ನೆಲೆ ಕೋಡಿ ಶ್ರೀಗಳು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಧಾರವಾಡ: ರಾಜ್ಯಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಸಂಭ್ರಮ ಮನೆ ಮಾಡಿದ್ದು, ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ. ಕೋಡಿಹಳ್ಳಿ ಶ್ರೀಗಳು ಈ ಹಿಂದೆ ಕೊರೊನಾ, ಚಂದ್ರಯಾನ, ಯುದ್ಧ ಹಾಗೂ ರಾಜಕೀಯದ ಬಗ್ಗೆ ಹೀಗೆ ಅನೇಕ ಭವಿಷ್ಯಗಳು ನುಡಿದಿದ್ದಾರೆ. ಇದೀಗ ದಸರಾ (Dasara) ಹಬ್ಬದ ಹಿನ್ನೆಲೆ ಕೋಡಿ ಶ್ರೀಗಳು ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಕೋಡಿ ಮಠದ ಶ್ರೀಗಳು ಹೇಳಿದ್ದೇನು?: ಧಾರವಾಡದಲ್ಲಿ ಕೋಡಿ ಮಠದ ಶ್ರೀಗಳ ಭವಿಷ್ಯ ನುಡಿದಿದ್ದಾರೆ. ಅಖಂಡ ಕರ್ನಾಟಕ ಒಂದಾಗಿ ಹೋಗಬೇಕು. ಸಮಸ್ತ ಮನುಕುಲಕ್ಕೆ ಲೇಸಾಗಬೇಕು, ಅದರಿಂದ ಇವತ್ತು ಧಾರವಾಡದಲ್ಲಿ ಜಂಬೂ ಸವಾರಿ ನಡೆಯುತ್ತಿದೆ. ಇದು ಅಖಂಡ ಕರ್ನಾಟಕದ ಸಂಸ್ಕೃತಿಯ ಪ್ರತೀಕ, ಮೈಸೂರಿನಲ್ಲಿ ಒಂದಾದರೆ ಇಡೀ ಉತ್ತರ ಕರ್ನಾಟಕಕ್ಕೆ ಈ ದಸರಾ ಒಂದಾಗಿದೆ, ಏಕತಾ ಮನೋಭಾವನೆಯ ಒಂದು ಸಂದೇಶ, ಬಹಳ ಸಂತೋಷ ಎಂದರು.
ಮುಂದುವರೆದು ಮಾತನಾಡಿರುವ ಕೋಡಿ ಶ್ರೀಗಳು, ವರ್ಷದಿಂದ ವರ್ಷಕ್ಕೆ ಅಖಂಡ ಕರ್ನಾಟಕದ ಸಂಕೇತ ಉಚ್ಚವಾಗಿದೆ ಎಂದು ಹೇಳಲು. ಈ ದಸರಾ ಕಾರಣವಾಗಿದೆ. ಮನುಷ್ಯನ ದುರ್ನಡೆಗಳು ಜೋರಾಗಿ ಸದ್ದಿನೊಳಗೊಂಡು ಮನುಷ್ಯ ಮನುಷ್ಯನಾಗಿ ಬಾಳಬೇಕಾದರೆ, ನಮ್ಮ ಹಿರಿಯರು ಆದರ್ಶದ ಸಂಕೇತ ಈ ಕಾರ್ಯಕ್ರಮ. ಇದು ಮುಂದೆಯೂ ನಡೆದುಕೊಂಡು ಹೋಗಲಿ ಎಂದು ಆಶಿಸುತ್ತೇವೆ ಎಂದು ಹೇಳಿದರು.
ಜನಜೀವನ ಕಷ್ಟ ಆಗುತ್ತೆ, ನೀರಿಗೆ ಹಾಹಾಕಾರ ಆಗುತ್ತದೆ: ವಿಶೇಷವಾಗಿ ನಾನು ಮೊದಲೇ ಹೇಳಿದ್ದೆ, ಮುಂಗಾರುಮಳೆ ಆಗುವುದಿಲ್ಲ, ಜನಜೀವನ ಕಷ್ಟ ಆಗುತ್ತೆ, ನೀರಿಗೆ ಹಾಹಾಕಾರ ಆಗುತ್ತದೆ. ಅನ್ನಕ್ಕೆ ಕೊರತೆ ಆಗುತ್ತದೆ, ಜನರು ಸಾಯುತ್ತಾರೆ. ವಿಪರೀತವಾದ ಭೂಕಂಪ ಆಗುತ್ತದೆ ಅಂತ. ಸದ್ಯಕ್ಕೆ ಹಿಂಗಾರು ಮಳೆ ಆಗುತ್ತೆ, ಜನರಿಗೆ ಸುಭಿಕ್ಷೆ ಆಗುತ್ತೆ, ನೆಮ್ಮದಿ ಸಿಗುತ್ತೆ. ಜಲಚರಗಳಿಗೆ ಒಳ್ಳೆಯದಾಗುತ್ತೆ ಎಂದು ಭವಿಷ್ಯ ನುಡಿದರು.
ಮುಂದೆ ಮಳೆಯೂ ಚೆನ್ನಾಗಿದೆ: ರಾಜಕೀಯ ಬದಲಾವಣೆ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ನಮಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ, ರೋಗ ರುಜಿನಗಳು ಬರಬಾರದು, ಎಲ್ಲರಿಗೂ ಒಳ್ಳೆಯದಾಗಲಿ ಮುಂದೆ ಮಳೆಯೂ ಚೆನ್ನಾಗಿದೆ ಎಂದು ಹೇಳಿದರು.
