Priyank Kharge: What is the police department’s home base? Let’s ask permission first; Priyank Karge thunders against RSS? – Priyank Karge Slams RSS: ಆರೆಸ್ಸೆಸ್ನವರು ನೂರು ವರ್ಷದ ಇತಿಹಾಸದಲ್ಲಿ ಯಾವ ಪ್ರತಿಭಟನೆ ಮಾಡಿದ್ದಾರೆ? ಬ್ರಿಟಿಷರ ಗುಲಾಮರು ಇವರು, ಬ್ರಿಟಿಷರಿಂದ ಪೆನ್ಷನ್ ತಗೊಳೋವರ ಹತ್ರ ನಾವು ಕಲಿಬೇಕಾ ಎಂದು ಖಾರವಾಗಿ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಯಾರಾದ್ರು ಏನಾದ್ರು RSS ನಿಂದ ಕಲಿಯೋದು ಇದ್ಯಾ? ಅವರ ಇತಿಹಾಸ ತೆಗೆದು ನೋಡಿ. ಯಾರು ಬ್ರಿಟಿಷರ ಹತ್ರ 60 ರೂ ಪೆನ್ಷನ್ ತಗೋತಾ ಇದ್ರು? ಸಾವರ್ಕರ್ ತಾನೇ? ಅಂತವರು ಇವರ ಲೀಡರ್ ಎಂದು ಕಿಡಿಕಾರಿದರು.
ಬೆಂಗಳೂರು: ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮತ್ತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಕಿಡಿಕಾರಿದ್ದಾರೆ. ಈ ಸಂಬಂಧ ಇಂದು ಮಾತನಾಡಿರುವ ಖರ್ಗೆ, ‘ಪೊಲೀಸ್ ಇಲಾಖೆ ಅವರ ಮನೆ ಆಳು ಏನ್ರಿ?’ ಎಂದು ಪ್ರಶ್ನಿಸಿದ್ದಾರೆ.
ಈ ಸಂಬಂಧ ಇಂದು ಸುದ್ದಿಗಾರರ ಜೊತೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ಬರೆದ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ‘ಅವರು ಅನುಮತಿ ಕೇಳಲಿ, ಅದರಲ್ಲಿ ಮಾಹಿತಿಗಾಗಿ ಅಂತ ಬರೆದಿದೆ, ಪೊಲೀಸ್ ಇಲಾಖೆ ಅವರ ಮನೆ ಆಳು ಏನ್ರಿ? ಬೀದಿಯಲ್ಲಿ ಮಾಡೋ ಕಾರ್ಯಕ್ರಮಕ್ಕೆ ಅನುಮತಿ ಕೇಳಲಿ ಎಂದು ಖಡಕ್ ಆಗಿ ಹೇಳಿದರು.
ಮೋಹನ್ ಭಾಗವತ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಹೇಗೆ ರಿಜೀಮ್ ಚೇಂಜ್ ಮಾಡೋಕೆ ಆಗುತ್ತದೆ ಎಂದು ಪ್ರಶ್ನಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಫಾರ್ಮ್ 6 ಮತ್ತು 7 ಅವರದ್ದು. ಪರ್ಮನೆಂಟ್ ಆಗಿ ಅಧಿಕಾರದಲ್ಲಿ ಮಾಡೋಕೆ ಮಾಡಿರುವ ಸಂಚು ಇದು. ಅದಕ್ಕೆ ಅವರು ಕಾನ್ಫಿಡೆಂಟ್ ಆಗಿ ನಡೀತಾ ಇರೋದು. ಯಾವ ದುಷ್ಟ ಶಕ್ತಿ ರೀ? ಇವರೇ ಪಾಕಿಸ್ತಾನ್ ಜೊತೆ ನಂಟು ಬೆಳೆಸ್ತಿರೋದು? ರಿಜೀಮ್ ಚೇಂಜ್, ರಾಜಕೀಯದ ಬಗ್ಗೆ ಮಾತಾಡೋಕೆ ಇವರು ಯಾರು ರೀ? ಎಂದು ಪ್ರಶ್ನಿಸಿದರು.
ಆರೆಸ್ಸೆಸ್ ಇವರ ಇತಿಹಾಸದಲ್ಲಿ ಯಾವ ಪ್ರತಿಭಟನೆ ಮಾಡಿದ್ದಾರೆ ರೀ? ಆರ್ ಎಸ್ ಎಸ್ ಇತಿಹಾಸ ತೆಗೆದು ನೋಡಿ ಎಂದ ಪ್ರಿಯಾಂಕ್ ಖರ್ಗೆ, ವಿದೇಶದಲ್ಲಿ ನಡೀತಾ ಇರೋದು ಇಲ್ಲಿಗೆ ಹೇಳೋದು ಬೇಡ, ಫ್ರಾನ್ಸ್ ನಲ್ಲಿ ಆಗ್ತಿರೋದು ಬೆಲೆ ಏರಿಕೆ, ಶಿಕ್ಷಣಕ್ಕಾಗಿ ಪ್ರತಿಭಟನೆ, ಇಲ್ಲಿ ಎಲೆಕ್ಷನ್ ಕಮೀಷನ್ ವಿರುದ್ದ ನಡೀತಾ ಇದೆ ಎಂದು ಹೇಳಿದರು.
RSS ಪಥಸಂಚಲನ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ತಪ್ಪೇನಿದೆ ನಾನು ಕೇಳಿದ್ರಲ್ಲಿ? ಲೋಪ ಇದ್ರೆ ತಿಳಿಸಿ ತಿದ್ದಿಕೊಳ್ಳೀಕೆ ತಯಾರಿದ್ದೀನಿ. ಅವರು ಪಥಸಚಲನ ಮಾಡ್ಬೇಕು ಅಂದ್ರೆ ಮಾಹಿತಿಗಾಗಿ ಅಂತ ಕೊಡ್ತಿದಾರೆ. ಮಾಹಿತಿಗಾಗಿ ಬೇಡ, ದಯವಿಟ್ಟು ಅನುಮತಿ ಕೇಳಿ. ಪೊಲೀಸ್ ಇಲಾಖೆ RSS ನ ಆಳು ಮಕ್ಕಳಲ್ಲ. ಮಾಹಿತಿ ಕೊಟ್ವಿ.. make necessary arrangements. ಇವಾಗ್ಲೇ ಬರ್ತೀವಿ ಇವಾಗ್ಲೇ ಹೋಗ್ತೀವಿ ಅಂತ ಹೇಳೋದಲ್ಲ ಎಂದರು.
ಇವರು ನೂರು ವರ್ಷದ ಇತಿಹಾಸದಲ್ಲಿ ಯಾವ ಪ್ರತಿಭಟನೆ ಮಾಡಿದ್ದಾರೆ? ಬ್ರಿಟಿಷರ ಗುಲಾಮರು ಇವರು, ಬ್ರಿಟಿಷರಿಂದ ಪೆನ್ಷನ್ ತಗೊಳೋವರ ಹತ್ರ ನಾವು ಕಲಿಬೇಕಾ ಎಂದು ಖಾರವಾಗಿ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಯಾರಾದ್ರು ಏನಾದ್ರು RSS ನಿಂದ ಕಲಿಯೋದು ಇದ್ಯಾ? ಅವರ ಇತಿಹಾಸ ತೆಗೆದು ನೋಡಿ. ಯಾರು ಬ್ರಿಟಿಷರ ಹತ್ರ 60 ರೂ ಪೆನ್ಷನ್ ತಗೋತಾ ಇದ್ರು? ಸಾವರ್ಕರ್ ತಾನೇ? ಅಂತವರು ಇವರ ಲೀಡರ್ ಎಂದು ಕಿಡಿಕಾರಿದರು.
ಹಬ್ಬದ ವಾತಾವರಣ ಇದು ಬಹಳಷ್ಟು ಜನ ಆಚರಣೆ ಮಾಡ್ತಾರೆ. ಅನುಮತಿ ಕೇಳಿ ಸೂಕ್ತ ಅನಿಸಿದ್ರೆ ಅನುಮತಿ ಕೊಡ್ತೀವಿ. ಗಣೇಶ ಮೆರವಣಿಗೆ ಮಾಡುವಾಗ ಮಾಹಿತಿ ಕೇಳ್ತೀರಾ ಅನುಮತಿ ಕೇಳ್ತೀರಾ? ಮನೆ ಕಾರ್ಯಕ್ರಮ ಮಾಡಬೇಕಾದರೆ ರೋಡ್ ಮೇಲೆ ಪೆಂಡಾಲ್ ಹಾಕಿದಾಗ ಏನ್ ಮಾಡ್ತೀರಾ? ಅದೇ ಎಲ್ಲರಿಗೂ ಅನ್ವಯಿಸುತ್ತದೆ RSS ಕೂಡ ಸೇರಿದಂತೆ. ಆರೆಸ್ಸೆಸ್ ಕಾನೂನು ಮತ್ತು ಸಂವಿಧಾನಕ್ಕೆ ಮೀರಿದ್ದೇನಲ್ಲ ಎಂದರು.
ರೂಟ್ ಮಾರ್ಚಸ್ ಮೇಲೆ ಏನಾದ್ರು ತೊಂದ್ರೆ ಇದ್ರೆ ಲೋಕಲ್ ಅಲ್ಲಿ ಸರಿ ಮಾಡ್ಕೊಳಿ. ದಯವಿಟ್ಟು ಪೊಲೀಸ್ ಇಲಾಖೆಗೆ ಸರ್ಕಾರಗಳಿಗೆ ಗೌರವ ಕೊಡೋದು ಕಲಿಯಲಿ. ಮಾಡ್ತಾ ಇದೀವಿ ಸೂಕ್ತ ಕ್ರಮ ವಹಿಸಿ ಅಂದ್ರೆ ಇಲಾಖೆಯವರು ಅವರ ಮನೇಲಿ ಕೆಲಸ ಮಾಡೋರ? ಅನುಮತಿ ಪಡೆಯದೇ ಮಾಡೋದಕ್ಕೆ ಆಗೋದಿಲ್ಲ ಎಂದು ಖಡಕ್ ಆಗಿ ಹೇಳಿದರು.
