Ayudha Puja and Vijayadashami celebrations with family members at T.A. Sharavana’s home! – ಆಯುಧ ಪೂಜೆ ಹಾಗೂ ವಿಜಯದಶಮಿಯ ಪವಿತ್ರ ಸಂದರ್ಭದಲ್ಲಿ ಶಾಸಕರು ಕರ್ನಾಟಕ ವಿಧಾನ ಪರಿಷತ್ ಹಾಗು ಉಪನಾಯಕರು ಜೆಡಿಎಸ್ ಶಾಸಕಾಂಗ ಪಕ್ಷ ಶ್ರೀ ಟಿ.ಎ.ಶರವಣ ರವರ ಸ್ವಗೃಹದಲ್ಲಿ ಕುಟುಂಬದ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸಮಸ್ತ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ಶ್ರಮ, ಸಾಧನೆ ಹಾಗೂ ಸಮೃದ್ಧಿಯ ಸಂಕೇತವಾದ ಆಯುಧ ಪೂಜೆಯು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯ ಮಹತ್ವವನ್ನು ಸಾರುವ ಪವಿತ್ರ ಆಚರಣೆಯಾಗಿದೆ. ನಮ್ಮ ದೈನಂದಿನ ಬದುಕಿನಲ್ಲಿ ನೆರವಾಗುವ ಉಪಕರಣಗಳು ಹಾಗೂ ಆಯುಧಗಳನ್ನು ಪೂಜಿಸುವ ಮೂಲಕ ಕಾಯಕದ ಮಹತ್ವ ಮತ್ತು ಶ್ರಮದ ಗೌರವವನ್ನು ಸ್ಮರಿಸುವುದು ಈ ಹಬ್ಬದ ವಿಶೇಷತೆಯಾಗಿದೆ.
ಸತ್ಯ ಮತ್ತು ಧರ್ಮದ ವಿಜಯವನ್ನು ಸಾರುವ ವಿಜಯದಶಮಿಯು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಭರವಸೆ, ಉತ್ಸಾಹ ಹಾಗೂ ಸಕಾರಾತ್ಮಕ ಸಂಕಲ್ಪಗಳಿಗೆ ನಾಂದಿಯಾಗಲಿ. ನಾಡಿನ ಜನರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ. ಎಲ್ಲರೂ ಹೊಸ ಉತ್ಸಾಹದೊಂದಿಗೆ ಪ್ರಗತಿಯ ಪಥದಲ್ಲಿ ಮುನ್ನಡೆಯುವಂತಾಗಲಿ ಎಂದು ಆಶಿಸಲಾಯಿತು.
ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದ ನಾಡಿನ ಸಮಸ್ತ ಜನರ ಮೇಲಿರಲಿ ಹಾಗೂ ರಾಜ್ಯವು ಸುಭಿಕ್ಷೆ, ಶಾಂತಿ ಮತ್ತು ಸಮೃದ್ಧಿಯಿಂದ ಕಂಗೊಳಿಸಲಿ ಎಂದು ಪ್ರಾರ್ಥಿಸಲಾಯಿತು.
