A white ‘bull calf’ was born in the belly of a black buffalo!.. – ಸಾಮಾನ್ಯವಾಗಿ ಎಮ್ಮೆ ಕಬ್ಬಿನ ಹಾಲಿನಂತೆ ಕಪ್ಪಗಿರುವ ‘ಎಮ್ಮೆ ಕರು’ಗೇ ಜನ್ಮ ನೀಡುವುದು ಪ್ರಕೃತಿಯ ನಿಯಮ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಈ ನಿಯಮಕ್ಕೆ ಅಚ್ಚರಿಯ ಎಂಬಂತೆ ಘಟನೆಯೊಂದು ನಡೆದಿದೆ.
ಯಾದಗಿರಿ, ಅ.21: ಸಾಮಾನ್ಯವಾಗಿ ಎಮ್ಮೆ ಕಬ್ಬಿನ ಹಾಲಿನಂತೆ ಕಪ್ಪಗಿರುವ ‘ಎಮ್ಮೆ ಕರು’ಗೇ ಜನ್ಮ ನೀಡುವುದು ಪ್ರಕೃತಿಯ ನಿಯಮ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಈ ನಿಯಮಕ್ಕೆ ಅಚ್ಚರಿಯ ಎಂಬಂತೆ ಘಟನೆಯೊಂದು ನಡೆದಿದೆ.
ಕಪ್ಪು ಬಣ್ಣದ ಎಮ್ಮೆಯೊಂದರ ಹೊಟ್ಟೆಯಲ್ಲಿ ಬಿಳಿ ಬಣ್ಣದ ‘ಹೋರಿ ಕರು’ ಜನ್ಮ ತಳೆದಿದ್ದು, ಈ ವಿಚಿತ್ರ ಹಾಗೂ ಅಪರೂಪದ ಘಟನೆ ಕಂಡು ಇಡೀ ಗ್ರಾಮಸ್ಥರೇ ಆಶ್ಚರ್ಯಚಕಿತರಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ರೈತ ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆ ಈ ಅಪರೂಪದ ಕರುಗೆ ಜನ್ಮ ನೀಡಿದೆ.
ಸುಮಾರು 10 ತಿಂಗಳುಗಳ ಕಾಲ ಗರ್ಭಿಣಿಯಾಗಿದ್ದ ಕಪ್ಪು ಎಮ್ಮೆಯು ಈ ಕರುಗೆ ಜನ್ಮ ನೀಡಿದ್ದು, ಕರುವಿನ ಬಣ್ಣ ಸಂಪೂರ್ಣ ಬಿಳಿಯಾಗಿದ್ದು ಹೋರಿ ಕರುವಿನಂತಿದೆ. ರೈತ ಪರಶುರಾಮ ಅವರು ತಮ್ಮ ಹೊಲದಲ್ಲಿ ಎಮ್ಮೆ ಹಾಗೂ ಹೋರಿಯನ್ನು ಒಂದೇ ಕಡೆ ಕಟ್ಟುತ್ತಿದ್ದರು.
ಹೀಗಾಗಿ, ಹೋರಿಯ ಸಂಪರ್ಕದಿಂದಲೇ ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನಿಸಿರಬಹುದು ಎಂದು ಊಹಿಸಲಾಗಿದ್ದು, ಈ ವಿಚಿತ್ರ ಕರುವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಪರಶುರಾಮ ಅವರ ಮನೆಗೆ ಬರುತ್ತಿದ್ದಾರೆ.
🐃 ಅಚ್ಚರಿಯ ಘಟನೆ! ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಕಪ್ಪು ಎಮ್ಮೆಗೆ ಬಿಳಿ ಬಣ್ಣದ ಹೋರಿ ಕರು ಜನನ. ಅಪರೂಪದ ಕರುವನ್ನು ನೋಡಲು ಗ್ರಾಮಸ್ಥರು ಆಗಮಿಸುತ್ತಿದ್ದಾರೆ.

