Mysuru Dasara: Which state CMs will come for Jambu Savari? Revealed Minister Yathindra Siddaramaiah! – ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲಾ ಸಿಎಂ ಕೂಡ ಸುತ್ತೂರು ಮಠಕ್ಕೆ ಬರೋದು ವಾಡಿಕೆ ಎಂದ ಸಚಿವ ಯತೀಂದ್ರ ಸಿದ್ದರಾಮಯ್ಯ, ಅವರು ಮಠಕ್ಕೆ ಬಂದು ಉಪಹಾರ ಸೇವಿಸಿ ಹೋಗ್ತಾರೆ. ಸಿಎಂರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೊಡ್ತೀವಿ ಎಂದರು.
ಮೈಸೂರು: ಐತಿಹಾಸಿಕ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿದ್ದು, ಜಂಬೂಸವಾರಿಗೆ ಕೊನೇಕ್ಷಣದ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯ ದಸರಾ ಹಲವು ವಿಚಾರಗಳಿಂದ ವಿಶೇಷ ಅನ್ನಿಸಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸುತ್ತೂರು ಮಠದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಇಂದು ದಸರಾ ಮಹೋತ್ಸವ ಕೊನೆಯ ದಿನ, ದಸರಾದ ಅತ್ಯಂತ ಮುಖ್ಯ ಘಟ್ಟ ಜಂಬೂ ಸವಾರಿ. ಈ ಬಾರಿ ದಸರಾಕ್ಕೆ ಕೇರಳ ಮತ್ತು ತೆಲಂಗಾಣ ರಾಜ್ಯದ ಸಿಎಂ ಬರ್ತಿದ್ದಾರೆ. ಮೂವತ್ತು ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಿದ್ದೀವಿ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲಾ ಸಿಎಂ ಕೂಡ ಸುತ್ತೂರು ಮಠಕ್ಕೆ ಬರೋದು ವಾಡಿಕೆ ಎಂದ ಸಚಿವ ಯತೀಂದ್ರ, ಅವರು ಮಠಕ್ಕೆ ಬಂದು ಉಪಹಾರ ಸೇವಿಸಿ ಹೋಗ್ತಾರೆ. ಸಿಎಂರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೊಡ್ತೀವಿ. ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದರು. ಜವಾಬ್ದಾರಿಯಿತ್ತು, ದಸರಾದಲ್ಲಿ ಭಾಗಿಯಾಗಿದ್ದರು. ಈ ಬಾರಿ ಶಾಸಕರಾಗಿದ್ದಾರೆ ಎಂದರು.
ಆದರೆ ಈ ಬಾರಿ ದಸರಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬರ್ತಾಯಿಲ್ಲ ಎಂದ ಸಚಿವ ಯತೀಂದ್ರ ಅವರು, ಸಿದ್ದರಾಮಯ್ಯ ಅವರ ಗೈರು ಇದ್ದೇ ಇರುತ್ತದೆ. ಅವರ ಸ್ಥಾನ ತುಂಬೋದು ಕಷ್ಟ ಎಂದರಲ್ಲದೇ, ಕಾಲ ಬದಲಾದಂತೆ ನಾವು ಬದಲಾಗಬೇಕು. ತಂದೆ ಅವರ ತೇಜೋವಧೆ ಮಾಡಲು ಸುಳ್ಳು ಸ್ಟಿಂಗ್ ಆಪರೇಷನ್ ಮಾಡಲೂ ಹೊರಟಿದ್ದರು. ತಂದೆಯವರು ದೂರು ಕೊಟ್ಟಿದ್ದರು, ತನಿಖೆ ನಡೆಯುತ್ತಿದೆ ಎಂದರು.
ತನಿಖೆ ನಡೆದು ಈ ಸುಳ್ಳು ಸ್ಟಿಂಗ್ ಆಪರೇಷನ್ ಹಿಂದೆ ಯಾರು ಇದ್ದಾರೆ ಅದು ಗೊತ್ತಾಗಬೇಕು. ಗೊತ್ತಾಗದೆ ಹೇಗೆ ಮಾತನಾಡಲಿ ಎಂದ ಯತೀಂದ್ರ, ಸ್ಟಿಂಗ್ ಆಪರೇಷನ್ ಮಾಡಿರೋದು ಮಾಧ್ಯಮದ ಮುಖ್ಯಸ್ಥರು ಹಾಗೂ ನಮ್ಮ ಪಕ್ಷದ ಮಹಿಳೆಯೊಬ್ಬರು ಅಂತಾ ಗೊತ್ತಾಗಿದೆ. ಅವರಿಗೆ ಯಾರು ಹೇಳಿ ಮಾಡ್ಸಿದ್ದಾರೆ ಅನ್ನೋದು ಗೊತ್ತಾಗಬೇಕಿದೆ. ತಂದೆಯವರನ್ನು ಕುಗ್ಗಿಸುವ ವಿಚಾರದಲ್ಲಿ 2022 ರಲ್ಲಿ ಪ್ರಯತ್ನ ನಡೆದಿತ್ತು, ಆದ್ರೆ ಅದು ಸುಳ್ಳು ಅಂತಾ ವಿಚಾರ ಕೈ ಬಿಟ್ಟಿದ್ದರು ಎಂದರು.
ನಮ್ಮ ತಂದೆಯವರಿಗೆ ಕೆಟ್ಟ ಹೆಸರು ತರಲೂ ಸತ್ತು ಹೋಗಿರುವ ಪ್ರಕರಣವನ್ನು ಮತ್ತೆ ಜೀವಂತ ಮಾಡಲೂ ಹೊರಟಿದ್ದಾರೆ ಎಂದ ಯತೀಂದ್ರ ಸ್ಟಿಂಗ್ ಹಿಂದೆ ಡಿಕೆಶಿ ಇದ್ದಾರೆಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ತನಿಖೆ ನಡೆಯದೆ ಹೇಗೆ ಹೇಳಲಾಗುತ್ತದೆ? ತನಿಖೆ ನಂತರ ಗೊತ್ತಾಗುತ್ತೆ ಎಂದರು.
