ರಾಮನಗರ ಜುಲೈ,14 : ಬಿಡದಿ ಟೌನ್ಶಿಪ್ ಯೋಜನೆಯ https://en.wikipedia.org/wiki/Bidadi ನಿನ್ನೆ ನಡೆದ ಜಟಾಪಟಿ .. ಇನ್ನೊಂದೆಡೆ ಬೂದಿ ಮುಚ್ಚಿದ ಕೆಂಡದಂತೆ ಮಾರ್ಪಟ್ಟಿತ್ತು.. ಆದ್ರೆ ನಿನ್ನೆ ಮಂಡಲಹಳ್ಳಿ ಗ್ರಾಮದಲ್ಲಿ ನಡೆದಿದ್ದ ಗಲಾಟೆ ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರ ಮೇಲೆ ಪೊಲೀಸರು FIR ದಾಖಲಿಸಿದ್ದಾರೆ. JMC ಸರ್ವೇ ಕಾರ್ಯಕ್ಕೆ ಬಂದಿದ್ದ ಅಧಿಕಾರಿಗಳ ಮೇಲೆ ರೈತರು ಹಲ್ಲೆ ಮಾಡಿದ್ದರು. ಪೊರಕೆ, ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಲಾಗಿತ್ತು. ಈ ಗಲಾಟೆ ಸಂಬಂಧ ಕಂದಾಯ ಇಲಾಖೆಯ ದೂರಿನ ಅನ್ವಯ 2 ಪ್ರತ್ಯೇಕ FIR ದಾಖಲಾಗಿದೆ. 2 FIRನಲ್ಲೂ ಸೇರಿ 20ಕ್ಕೂ ಹೆಚ್ಚು ರೈತರ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ..

ಹೌದು ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. 2 ಪ್ರತ್ಯೇಕ FIRಗಳು ದಾಖಲಾಗಿದ್ದು, ಕಾರು ಚಾಲಕ ಮೊಹಮದ್ ಸಮೀರ್ ಹಾಗೂ ರಾಮನಗರ ಗ್ರಾ. ಠಾಣೆಯ ಇನ್ಸ್ ಪೆಕ್ಟರ್ ನೀಡಿದ ದೂರಿನ ಅನ್ವಯ ಎರಡು ಎಫ್ಐಆರ್ಗಳು ದಾಖಲಾಗಿದೆ. ಕಾರು ಚಾಲಕ ನೀಡಿದ ದೂರಿನ ಮೇರೆಗೆ ರೈತರಾದ ಪ್ರಕಾಶ್, ಭಾಗ್ಯ, ಮೋಹನ್, ವರಲಕ್ಷ್ಮಿ, ಹರೀಶ್, ನಾಗರಾಜ್, ಕೃಷ್ಣ, ಯಶವಂತ್, ರೇವಣ್ಣ, ಜಯಮ್ಮ, ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. BNS 189(2), 126(2), 352, 351(2), 109(1), 115(2), 118(1), 132, 133, 74, 190 ಅಡಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ಇನ್ಸ್ ಪೆಕ್ಟರ್ ಮುರುಳಿ ನೀಡಿದ ದೂರಿನ ಅನ್ವಯ ಪ್ರಕರಣ, ಅಪರಿಚಿತ ರೈತರ ವಿರುದ್ಧ BNS 189(2), 126(2), 352, 351(2), 109(1), 115(2), 118(1) 132, 133, 74, 190 ಅಡಿ ಪ್ರಕರಣ ದಾಖಲಾಗಿದೆ.

ಜೆಎಂಸಿ ಸರ್ವೇಗೆ ಬಿತ್ತು ತಾತ್ಕಾಲಿಕ ಬ್ರೇಕ್..!
ಬಿಡದಿ ಟೌನ್ಶಿಪ್ ನೆಪದಲ್ಲಿ ಅಮಾಯಕ ರೈತರ ಮೇಲೆ FIR ದಾಖಲಿಸಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಯಾವುದೇ ಮಾಹಿತಿ ಇಲ್ಲದೆ ರೈತರ ಭೂಮಿಗೆ ನುಗ್ಗಿ ಜಂಟಿ ಮಾಪನ (JMC) ಮಾಡಲು ಮುಂದಾಗಿದ್ದು, ಅದನ್ನು ಪ್ರಶ್ನಿಸಿದ ರೈತರ ಹೋರಾಟವನ್ನು ಹತ್ತಿಕ್ಕಲು ಈ ಜನವಿರೋಧಿ ಸರ್ಕಾರ FIR ಅಸ್ತ್ರ ಬಳಸಿ ಬೆದರಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ದಬ್ಬಾಳಿಕೆಗೆ ನಮ್ಮ ರೈತ ಬಂಧುಗಳು ಹೆದರುವ ಅಗತ್ಯವಿಲ್ಲ. ನಿಮ್ಮ ನ್ಯಾಯಯುತ ಹೋರಾಟಕ್ಕೆ ಅಗತ್ಯವಿರುವ ಸಂಪೂರ್ಣ ಕಾನೂನು ನೆರವು ಹಾಗೂ ಬೆಂಬಲ ನೀಡಲು ನಾವೆಲ್ಲರೂ ನಿಮ್ಮೊಂದಿಗೆ ಸದಾ ಸಿದ್ಧರಿದ್ದೇವೆ. ಇನ್ನು 48 ಗಂಟೆಗಳ ಒಳಗೆ ರೈತರ ಮೇಲಿನ ಸುಳ್ಳು FIR ರದ್ದುಗೊಳಿಸಿ, ವಶಕ್ಕೆ ಪಡೆದಿರುವ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಈ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದು ನಿಶ್ಚಿತ ಎಂದು ನಿಕಿಲ್ ಕುಮಾರಸ್ವಾಮಿ ʻX’ನಲ್ಲಿ ಟ್ವೀಟ್ ಮಾಡಿದ್ದಾರೆ.
