ಹೊಸಪೇಟೆ(ವಿಜಯನಗರ), ಜು.29: ಹೊಸಪೇಟೆಯ ಸಹಕಾರ ಬ್ಯಾಂಕ್ ಯೂನಿಯನ್ ಸಭಾಂಗಣದಲ್ಲಿ ವಾಲ್ಮೀಕಿ ನಾಯಕ ಪದವೀಧರ ವಿದ್ಯಾವರ್ಧಕ ಸಂಘದಿಂದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರ ಉದ್ಘಾಟಿಸಲಾಯಿತು.
ಸಮಾರಂಭದಲ್ಲಿ ಕಡಲಬಾಳು ಮರೀಶಾಂತವೀರ ಮಹಾಸ್ವಾಮೀಜಿಗಳು ಸೇರಿದಂತೆ ಅಧಿಕಾರಿಗಳು ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ಸಂಕಲ್ಪ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರವನ್ನು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು.
ವಿದ್ಯಾರ್ಥಿಗಳು ತಾವು ಕಂಡಂತ ಕನಸನ್ನು ನನಸು ಮಾಡಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ತರಬೇತಿ ಕೇಂದ್ರಗಳ ಸಹಾಯದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆದು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಬೇಕು. ನಿಮ್ಮನ್ನ ಸಾಕಿದ ತಂದೆ-ತಾಯಿಗಳಿಗೆ, ಗ್ರಾಮಕ್ಕೆ ಕೀರ್ತಿ ತರಬೇಕಿದೆ ಎಂದು ಶ್ರೀಗಳು ಆಶಿಸಿದರು.
