Sting operation against Siddaramaiah: KPCC notice to Congress woman leader Krupa Alva; instruction from the president himself – ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ನಲ್ಲಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರ ಪಾತ್ರವಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಕೋರಿ ಅವರಿಗೆ ಶೋಕಾಸ್ ನೋಟಿಸ್ ನೀಡಲು ಕೆಪಿಸಿಸಿ ನಿರ್ಧರಿಸಿದೆ. ರಾಜಕೀಯ ಸೇಡಿನ ಈ ಕೃತ್ಯದಲ್ಲಿ ಪಕ್ಷದವರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೇ ತಿಳಿಸಿದ್ದಾರೆ.
- ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕಾಂಗ್ರೆಸ್ನಿಂದ ಮಹಿಳಾ ನಾಯಕಿ ಕೃಪಾ ಆಳ್ವಗೆ ನೋಟಿಸ್ಗೆ ಸಿದ್ಧತೆ.
- ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಪಡೆಯಲು ಪಕ್ಷ ಮುಂದಾಗಿದೆ.
- ನೋಟಿಸ್ ನೀಡಿ ಆ ಬಳಿಕ ಅಗತ್ಯ ಕ್ರಮ ಎಂದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್.
![]()
ಬೆಂಗಳೂರು: ಸಿದ್ದರಾಮಯ್ಯರನ್ನು ಬಿಟ್ಟರೆ ಮತ ಸೆಳೆಯೋ ನಾಯಕರು ಕಾಂಗ್ರೆಸ್ನಲ್ಲಿ ಯಾರಿದ್ದಾರೆ? ಎಂದು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪರವಾಗಿ ಮಮತೆ ಯಾಕೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಸ್ಟಿಂಗ್ ಆಪರೇಷನ್ ಜೆಡಿಎಸ್ ರೂಪಿಸಿದ ಸಂಚಲ್ಲ.ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಯಾವ ನಾಯಕರಿದ್ದಾರೆ ಓಟ್ ತರಲು. ಇವಾಗ ಅವರನ್ನು ಮನೆಯಲ್ಲಿ ಕೂರಿಸಲಾಗಿದೆ. ಸಿದ್ದರಾಮಯ್ಯ ಅವರ ಶಕ್ತಿ ವಿರುದ್ಧ ನಮ್ಮ ಹೋರಾಟ ಇತ್ತು. ಅಂತಹ ವ್ಯಕ್ತಿಯ ವರ್ಚಸ್ಸನ್ನು ನಾವು ಹಾಳು ಮಾಡಿಲ್ಲ, ಬದಲಾಗಿ ನೀವು ಹಾಳು ಮಾಡುತ್ತಿರುವುದು. ಸಿದ್ದರಾಮಯ್ಯ ಅವರ ವರ್ಚಸ್ಸು ಮುಗಿಸಲು ಯತ್ನಿಸುತ್ತಿರುವರು ನೀವು ಎಂದು ಡಿಕೆ ಶಿವಕುಮಾರ್ ವಿರುದ್ಧ ಎಚ್ಡಿಕೆ ವಾಗ್ದಾಳಿ ನಡೆಸಿದರು.
ಕರ್ನಾಟಕಕ್ಕೆ ಉದ್ಯಮಿಗಳು ಬರಲು ಭಯ ಬೀಳ್ತೀದ್ದಾರೆ!
ಕರ್ನಾಟಕಕ್ಕೆ ಉದ್ಯಮಿಗಳು ಬರಲು ಭಯ ಬೀಳ್ತೀದ್ದಾರೆ ಎಂದು ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಆರೋಪಿಸಿದರು. ಕೇಂದ್ರ ಕೈಗಾರಿಕೆ ಸಚಿವರಾಗಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿ ಎನ್ನುತ್ತಾರೆ ಸಿಎಂ. ಆದರೆ, ಉದ್ಯಮಿಗಳಿಗೆ ಕರ್ನಾಟಕಕ್ಕೆ ಹೋಗಿ ಎಂದರೆ ಕೈಮುಗಿಯುತ್ತಾರೆ. ಹಿಂದೆ ಕರ್ನಾಟಕಕ್ಕೆ ಉದ್ಯಮಿಗಳು ಬರುತ್ತಿದ್ದರು, ಆದರೆ ಇವಾಗ ಯಾರೂ ಬರುತ್ತಿಲ್ಲ. ಕರ್ನಾಟಕ ಎಂದರೆ ಉದ್ಯಮಿಗಳು ಭಯ ಬೀಳುತ್ತಾರೆ. 974 ಅರ್ಜಿಗಳಿಗೆ ಇನ್ನೂ ಕ್ಲಿಯರೆನ್ಸ್ ನೀಡಿಲ್ಲ ಕರ್ನಾಟಕದಲ್ಲಿ ಎಂದು ಆರೋಪಿಸಿದರು. ಹಾಗಿರುವಾಗ ಯಾಕಾಗಿ ಕರ್ನಾಟಕಕ್ಕೆ ಉದ್ಯಮಿಗಳು ಬರುತ್ತಾರೆ? ಎಂದು ಪ್ರಶ್ನಿಸಿದರು.
ಡಿಕೆಶಿಯನ್ನು ಸಿಎಂ ಎಂದು ಒಪ್ಪಲ್ಲ
ನಿಮ್ಮನ್ನು ಮುಖ್ಯಮಂತ್ರಿ ಎಂದು ಒಪ್ಪಲ್ಲ ಎಂದು ಡಿಕೆಶಿಗೆ ಎಚ್ಡಿಕೆ ತಿರುಗೇಟು ನೀಡಿದರು. ನಿಮ್ಮ ಬಗ್ಗೆ ಬರೆದಿರುವ ಪುಸ್ತಕ ಓದಿದರೆ ನಿಮ್ಮನ್ನು ಸಿಎಂ ಎಂದು ಯಾರೂ ಒಪ್ಪಲ್ಲ ಎಂದ ಅವರು, ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿ ವಿರುದ್ಧದ ಪುಸ್ತಕ ಪ್ರದರ್ಶನ ಮಾಡಿದರು. ಸಿಎಂಗೆ ಪತ್ರ ಬರೆದ ವಿಚಾರವಾಗಿ ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ಕೆಪಿಎಸ್ಸಿ ಬಗ್ಗೆ ದಾಖಲೆ ನಿಮ್ಮ ಬಳಿಯೇ ಇದೆ. ಆದರೆ ಮಾತೆತ್ತಿದ್ದರೆ ನನ್ನ ಬಳಿ ದಾಖಲೆ ಕೇಳ್ತಾರೆ ಪ್ರಿಯಾಂಕ್ ಖರ್ಗೆ . ಹಗರಣದ ಬಗ್ಗೆ ಪ್ರಸ್ತಾಪ ಮಾಡಿದರೆ ಅಸೂಯೆ ಎನ್ನುತ್ತಾರೆ. ಆದರೆ ಬಿಜೆಪಿ ನಾಯಕರನ್ನು ಸಿಕ್ಕಿಸಿ ಹಾಕಲು ಕೆಪಿಎಸ್ಸಿ ಇಶ್ಯೂ ತರಲಾಗಿದೆ ಎಂದು ಸಿಎಂ ಹೇಳ್ತಿದ್ದಾರೆ. ಬಿಎಸ್ವೈ ಹಾಗೂ ವಿಜಯೇಂದ್ರ ಫಿಕ್ಸ್ ಮಾಡಲು ಅಸೂಯೆಯಿಂದ ಹೀಗೆ ಮಾಡ್ತಿದ್ದೇನೆ ಎಂದು ಸಿಎಂ ಆರೋಪ ಮಾಡುತ್ತಾರೆ. ರಾಜ್ಯದ ಸಿಎಂ ಆಗಿ ಈ ರೀತಿಯಲ್ಲಿ ಉತ್ತರ ಕೊಡಬಹುದೇ? ಎಂದು ಎಚ್ಡಿ ಕುಮಾರಸ್ವಾಮಿ ಕಿಡಿಕಾರಿದರು.
ಸ್ಟಿಂಗ್ ಕುರಿತಾಗಿ ಎಚ್ಡಿಕೆ ಪ್ರಶ್ನೆ: ಸ್ಟಿಂಗ್ ಆಪರೇಷನ್ನಲ್ಲಿ ಕಾಣಿಸಿಕೊಂಡ ಕೃಪಾ ಆಳ್ವಾ ಕಾಂಗ್ರೆಸ್ ನವರು. 2011 ರಲ್ಲಿ ಆದ ಘಟನೆಯಂತೆ. ಯಾಕಪ್ಪ 2023 ಆ ಹೆಣ್ಣುಮಗಳನ್ನ ಕೂರಿಸಿಕೊಂಡು ರಲ್ಲಿ ಸ್ಟಿಂಗ್ ಅಪರೇಷನ್ ಮಾಡುದ್ರಿ? ಆದರೆ, ನಮ್ಮ ಪಕ್ಷದ ಕಾರ್ಯಕರ್ತರಿಗೆ ನೋಟಿಸ್ ಕೊಡ್ತಾರೆ. ಯಾಕೆ ಆ ಹೆಣ್ಣುಮಗಳನ್ನ ಕರೆದುಕೊಂಡು ಬಂದು ಹೇಳ್ತಿಯಾ ಹೇಳ್ತಿಯಾ ಅಂತ ಯಾಕೆ ಸ್ಟಿಂಗ್ ಮಾಡಿದ್ರು? ಇದರ ಸತ್ಯ ಹೊರಗೆ ತರ್ತಾರಾ ಹೋಮ್ ಮಿನಿಸ್ಟರ್? ಎಂದು ಪ್ರಶ್ನಿಸಿದರು.
