Siddhu sting: Did the woman in the video give him a clean chit? Police question Krupa Alva – ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತಾಗಿ ಹರಿಯಬಿಟ್ಟಿದ್ದ ಸ್ಟಿಂಗ್ ವಿಡಿಯೋ ಒಂದು ರೀತಿಯಲ್ಲಿ ಕಟ್ಟುಕಥೆಯಾಗಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬರುತ್ತಿದೆ. ಸ್ಟಿಂಗ್ ಆಪರೇಷನ್ ವಿಡಿಯೋದಲ್ಲಿ ಮಹಿಳೆ ಕೊಟ್ಟರೇ ಕ್ಲೀನ್ಚಿಟ್ ಎಂಬ ಪ್ರಶ್ನೆಯೂ ಇದೀಗ ಉದ್ಭವಿಸಿದೆ. ವಿಡಿಯೋ ಕುರಿತಾಗಿ ಕಾಂಗ್ರೆಸ್ ನಾಯಕಿಯಾಗಿರುವ ಕೃಪಾ ಆಳ್ವಾ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.
![]()
ಸೂತ್ರಧಾರರ ಬೇಟೆಗೆ ತನಿಖೆ? : ಸಿದ್ದರಾಮಯ್ಯ ವಿರುದ್ಧ ಮಹಿಳೆಯ ಬಳಿ ಸುಳ್ಳು ಮಾಹಿತಿ ಹೇಳಿಸಿ ವಿಡಿಯೊ ಮಾಡಿಟ್ಟುಕೊಂಡಿದ್ದ ಹಾಗೂ ಅದನ್ನು ಹೊರಗಡೆ ಬಿಟ್ಟ ಪ್ರಮುಖ ಆರೋಪಿಗಳನ್ನು ತನಿಖಾಧಿಕಾರಿಗಳು ಗುರುತಿಸಿದ್ದಾರೆ. ಈಗಾಗಲೇ ವಿಡಿಯೊ ಅಪ್ಲೋಡ್ ಮಾಡಿದ್ದ ರಿತೇಶ್ ಪಾಂಡೆಯನ್ನು ಬಂಧಿಸಿದ್ದಾರೆ.ಆದರೆ, ರಿತೇಶ್ ಪಾಂಡೆಗೆ ಈ ಟಾಸ್ಕ್ ಕೊಟ್ಟವರು? ಹಣಕಾಸು ನೆರವು ನೀಡಿದವರು ಹಾಗೂ ಇಡೀ ನಕಲಿ ಸ್ಟಿಂಗ್ನ ಸೂತ್ರಧಾರರ ಬೇಟೆಗೆ ತನಿಖಾಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೃಪಾ ಆಳ್ವಾ ವಿಚಾರಣೆ ? : ಸ್ಟಿಂಗ್ ವಿಡಿಯೋದಲ್ಲಿಕಾಣಿಸಿಕೊಂಡಿದ್ದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರನ್ನು ಸಿಸಿಬಿ ಸೈಬರ್ ಠಾಣೆ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರು ಸ್ವತಃ ‘ ಕೃಪಾ ಆಳ್ವಾ ಕೂಡ ಸ್ಟಿಂಗ್ ಷಡ್ಯಂತ್ರದಲ್ಲಿಭಾಗಿಯಾಗಿದ್ದಾರೆ’ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪ್ರಕರಣದ ತನಿಖೆ ಮತ್ತಷ್ಟು ಬಿರುಸು ಪಡೆದಿದ್ದು, ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೃಪಾ ಆಳ್ವಾ ಸ್ವಯಂಪ್ರೇರಿತವಾಗಿ ವಿಚಾರಣೆ ಎದುರಿಸಿದ್ದಾರೆ. ಜತೆಗೆ, ವಿಡಿಯೊ ಕುರಿತು ಕೆಲವು ವಿಚಾರ ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
