ಬಲಿಪಾಡ್ಯಮಿ ದೀಪಾವಳಿ ಹಬ್ಬದ ೪ನೇ ದಿನವಾದ ಕಾರ್ತಿಕ ಮಾಸದ ಶುಕ್ಲಪಕ್ಷದ ಮೊದಲ ದಿನವನ್ನು ಗುರುತಿಸುತ್ತದೆ. ಈ ದಿನವನ್ನು ಮಹಾಬಲಿ ಅಥವಾ ಬಲಿಚಕ್ರವರ್ತಿ ರಾಜನಿಗೆ ಸಮರ್ಪಿಸಲಾಗುತ್ತದೆ.
ಬಲಿ ಚಕ್ರವರ್ತಿ ದೈತ್ಯ ವಂಶದ ಪ್ರಮುಖ ಚಕ್ರವರ್ತಿ, ಅವನು ಹೊರಣ ಮತ್ತು ಕಪಿಮುಖ ದೈತ್ಯರ ವಂಶಕ್ಕೆ ಸೇರಿದವನು. ತಂದೆ ಪ್ರಯಾಗ, ತಾಯಿ ತಾರಾ . ಬಲಿಯು ಒಂದು ದೊಡ್ಡ ಪ್ರಬಲ ಕುಟುಂಬದಿಂದ ಬಂದಂತಹವನಾಗಿದ್ದು, ಅವನಿಗೆ ಸಮರ್ಥ ಕೌಟುಂಬಿಕ ಬೆಂಬಲವಿತ್ತು.ವಿಶೇಷವಾಗಿ ತನ್ನ ಪಾಠಶಾಲೆಯ ಗುರು ಶುಕ್ರಾಚಾರ್ಯ ಮಾರ್ಗದರ್ಶನದಲ್ಲಿ ಧರ್ಮ, ನೈತಿಕತೆ ಮತ್ತು ಶಕ್ತಿಯ ಬಗ್ಗೆ ಶಿಕ್ಷಣ ಪಡೆದನು.
ಬಲಿ ಚಕ್ರವರ್ತಿ ದೋಷರಾಜನಾಗಿದ್ದ ದೊಡ್ಡ ಶಕ್ತಿಯ ದೈತ್ಯ ರಾಜ. ಮೂರು ಲೋಕಗಳನ್ನೂ (ಸ್ವರ್ಗ, ಭೂಮಿ, ಪಾತಾಳ) ವಿಜಯಶಾಲಿಯಾಗಿದ್ದು, ತನ್ನ ಜನತೆಗೆ ದಾನಶೀಲನಾಗಿದ್ದು, ಮಹಾಯಾಗ (ಅಶ್ವಮೇಧ) ಮಾಡಿ ಜನರಿಗೆ ಉಡುಗೊರೆ ನೀಡಲು ತನ್ನ ಗುರು ಶುಕ್ರಾಚಾರ್ಯ ನೇತೃತ್ವದಲ್ಲಿ ಯಾಗವನ್ನು ಆರಂಭಿಸಿದನು,ಆ ಸಮಯದಲ್ಲಿ ಮಹಾವಿಷ್ಣು ವಾಮನ ಅವತಾರದಲ್ಲಿ ಬಲಿಯ ಯಾಗಕ್ಕೆ ಬಂದಂತಹ ಸಂದರ್ಭದಲ್ಲಿ ಬಲಿಗೆ ಮೂರು ಹೆಜ್ಜೆಗಳ ಜಾಗವನ್ನು ದಾನವಾಗಿ ಕೊಡಲು ಕೇಳಿದಾಗ ಬಲಿ ತನ್ನ ಮಾತಿಗೆ ಬದ್ಧನಾಗಿ ಒಪ್ಪಿಕೊಂಡನು.
ತದನಂತರ ವಾಮನು ತನ್ನ ತ್ರಿವಿಕ್ರಮ ಅವತಾರವನ್ನು ತಾಳಿ ಮೊದಲ ಹೆಜ್ಜೆಯನ್ನು ಸ್ವರ್ಗದ ಮೇಲೆ ಎರಡನೇ ಹೆಜ್ಜೆ ಭುಮಿಯ ಮೇಲೆ ಇಟ್ಟು, ಮೂರನೇ ಮತ್ತು ಕೊನೆಯ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಕೇಳಿದಾಗ ಬಲಿ ತನ್ನ ತಲೆಯನ್ನು ಮಡಿದನು.ವಾಮನು ತನ್ನ ಮೂರನೆ ಹೆಜ್ಜೆಯನನು ಬಲಿಯ ತಲೆ ಮೇಲಿಟ್ಟು, ಪಾತಾಳ ಲೋಕಕ್ಕೆ ತಳ್ಳಲ್ಪಟ್ಟನು. ನಂತರ ಮಹಾವಿಷ್ಣು ಬಲಿಯನ್ನು ವೈಕುಂಠಕ್ಕೆ ಕರೆಸಿಕೊಂಡನು.
ಮಹಾಬಲಿಯೊಬ್ಬ ಶಕ್ತಿಶಾಲಿ, ಧರ್ಮನಿಷ್ಠ ಮತ್ತು ದಾನಶೀಲ ರಾಜನಾದ ಅವನು ತನ್ನ ಸಾಮ್ರಾಜ್ಯದ ಪ್ರಜೆಗಳ ಕ್ಷೇಮ-ಹಿತಾಸಕ್ತಿ, ಕಲ್ಯಾಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದನು. ವಿಷ್ಣುವಿನ ಅವತಾರಗಳಲ್ಲೊಂದಾದ ವಾಮನ ಅವತಾರದಲ್ಲಿ ತನ್ನ ಮೂರು ಹೆಜ್ಜೆ ಭೂಮಿಯನ್ನು ಹೆಚ್ಚಿಸಲು ಬಲಿಯ ಬಳಿ ಕೇಳಿದಾಗ, ಬಲಿ ತನ್ನ ತಲೆಯನ್ನು ಮೂರನೆ ಹೆಜ್ಜೆಗಾಗಿ ಅರ್ಪಿಸಿದನು. ಇದರಿಂದ ವಿಷ್ಣು ಬಲಿಯನ್ನು ಪಾತಾಳ ಲೋಕದ ರಾಜನನ್ನಾಗಿ ನೇಮಿಸಿದ. ಅಂದಿನಿಂದ ವರ್ಷಕ್ಕೆ ಒಂದು ದಿನ ತಾನು ಭೂಮಿಗೆ ಬಂದು ತನ್ನ ಜನರನ್ನು ಭೇಟಿ ಮಾಡಿ ಅವರನ್ನು ಆಶಿರ್ವದಿಸಬಹುದು ಎಂದು ವರವನ್ನು ನೀಡಿದನು.
ಈ ದಿನವು ಬಲಿಯ ಔದಾರ್ಯ, ನಮ್ರತೆ ಮತ್ತು ಶ್ರದ್ದೆಯನ್ನು ಸ್ಮರಿಸಲಾಗುತ್ತದೆ. ಶಕ್ತಿಯನ್ನು ಜಾಗೃತಿಯಿಂದ ಮತ್ತು ಪರೋಪಕಾರದಿಂದ ಬಳಸಬೇಕೆಂದು ಪಾಠವನ್ನು ತಿಳಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅನೇಕ ಪ್ರಾಂತ್ಯಗಳಲ್ಲಿ ಆಚರಿಸಲಾಗುತ್ತದೆ ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಬಲಿಯ ಪೂಜೆಯನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಬಲಿಯ ಚಿತ್ರಕ್ಕೆ ದೀಪಗಳನ್ನು ಹಚ್ಚಿ ಸಿಹಿ ತಿಂಡಿಗಳನ್ನು ಅರ್ಪಿಸಿ ಹಬ್ಬವನ್ನು ಆಚರಿಸುತ್ತಾರೆ.
